ಪತ್ತನಾಜೆ ಸೇವೆ ಯಕ್ಷಗಾನ ಬಯಲಾಟದಲ್ಲಿ ಕಲಾವಿದ ಉಮೇಶ್ ಸಾಲ್ಯಾನ್‌ಗೆ ಸನ್ಮಾನ

0
79

ಮೂಡುಬಿದಿರೆ: ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇರುವೈಲು ಇದರ ಪತ್ತನಾಜೆ ಸೇವೆ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಕಟೀಲು ಮೇಳದ ಕಲಾವಿದ, ಮಹಿಷಾಸುರ ಪಾತ್ರಧಾರಿ ಉಮೇಶ್ ಸಾಲ್ಯಾನ್ ಕುಪ್ಪೆಪದವು ಇವರನ್ನು ಸನ್ಮಾನಿಸಲಾಯಿತು.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇರುವೈಲು ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸುಜಾತ, ಅಧ್ಯಕ್ಷತೆ ವಹಿಸಿದ್ದು, ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಅಸ್ರಣ್ಣ ಆಶೀರ್ವಚನ ನೀಡಿದರು. ಮೇಳದ ಅಧ್ಯಕ್ಷರಾದ ಐ. ಕುಮಾರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಭುಜಂಗ ಶೆಟ್ಟಿ, ಸತೀಶ್ ಸಾಲ್ಯಾನ್ ಪಾಣಿಲ, ಜಯರಾಮ ಬಂಗೇರಾ, ಉಮೇಶ್ ಸಾಲ್ಯಾನ್ ರ ಪತ್ನಿ ಶ್ರೀಮತಿ ಶ್ಯಾಮಲ ಉಪಸ್ಥಿತರಿದ್ದರು. ಸುರೇಶ್ ಪ್ರಭು ನಡುಬಾಳಿಕೆ ಸನ್ಮಾನ ಪತ್ರ ವಾಚಿಸಿದರು. ನಾರಾಯಣ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here