ಉಡುಪಿ : ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್, ಜಿಲ್ಲೆ 275 S, ಉಡುಪಿ ಇದರ ವತಿಯಿಂದ, ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಬಗ್ಗೆ ” ಅಲಯನ್ಸ್ ಗ್ರೀನ್ ಅವಾರ್ಡ್ ” ಎಂಬ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅನ್ವಯ 4 ರಿಂದ 8 ವರ್ಷ ಹಾಗೂ 9 ರಿಂದ 15 ವರ್ಷಗಳ ವರೆಗಿನ ವಯೋಮಿತಿಯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದು.ಗ್ರೀನ್ ಪೋಸ್ಟರ್” ಇದೊಂದು ಚಿತ್ರಕಲಾ (ಡ್ರಾಯಿಂಗ್) ಸ್ಪರ್ಧೆಯಾಗಿದ್ದು ಮೇಲಿನ ವಯೋಮಿತಿಯ ಶಾಲಾ ವಿದ್ಯಾರ್ಥಿಗಳು, Inspired by Nature. For Climate. For Future ಎನ್ನುವ ತತ್ವವನ್ನು ಅಳವಡಿಸಿಕೊಂಡು ನಿಗದಿತ ಸೈಜಿನ ಹಾಳೆಯಲ್ಲಿ ( ಡ್ರಾಯಿಂಗ್ ಶೀಟ್ :- 22″x13″ ಅಳತೆ ) ಕಲಾಕೃತಿಯನ್ನು ರಚಿಸತಕ್ಕದ್ದು. ಈ ಸ್ಪರ್ಧೆಯು ಆಯಾಯ ಶಾಲೆಯ ಮುಖ್ಯೋಪಾಧ್ಯಾಯರ ಅಥವಾ ಸಂಬಂಧಪಟ್ಟ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಜುಲೈ 15 ರ ಒಳಗಡೆ ನಡೆಸುವುದು. ಹೀಗೆ ರಚಿಸಿದ ಕಲಾಕೃತಿಯನ್ನು ಸಂಬಂಧಪಟ್ಟ ಶಾಲೆಗಳು ಜುಲೈ 25 ರ ಒಳಗಾಗಿ ಆಯಾಯ ಅಲಯನ್ಸ್ ಕ್ಲಬ್ ಗಳ ಮೂಲಕ, ಅಲಯನ್ಸ್ ಡಿಸ್ಟ್ರಿಕ್ಟ್ 275 S ಇವರಿಗೆ ತಲುಪಿಸುವುದು.
ಹೀಗೆ ರಚಿಸಿದ ಕಲಾಕೃತಿಗಳನ್ನು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಗೆ ಕಳುಹಿಸಿ, ಅಲ್ಲಿ ಪ್ರಥಮ ಬಂದ ಕಲಾಕೃತಿಗೆ ರೂ. 50,000/- ಟ್ರೋಫಿ ಹಾಗೂ ಸರ್ಟಿಫಿಕೇಟ್, ದ್ವಿತೀಯ ರೂ. 25,000/- ಟ್ರೋಫಿ ಹಾಗೂ ಸರ್ಟಿಫಿಕೇಟ್, ತೃತೀಯ ರೂ. 15,000/-, ಟ್ರೋಫಿ ಹಾಗೂ ಸರ್ಟಿಫಿಕೇಟ್ ಹಾಗೂ ಸಮಾಧಾನಕರ ಬಹುಮಾನವಾಗಿ ರೂ. 5,000/- ಮತ್ತು ಸರ್ಟಿಫಿಕೇಟ್ ನೀಡಲಾಗುತ್ತದೆ.
ಮೇಲಿನ ಸ್ಪರ್ಧಾ ವಿಜೇತರನ್ನು ಅಗಸ್ಟ್ 15, 2026 ರಂದು ಜಿಲ್ಲೆಯಲ್ಲಿ ಜರುಗುವ ಸಮಾರಂಭದಲ್ಲಿ ಗಣ್ಯರ ಸಮಕ್ಷಮದಲ್ಲಿ ಸನ್ಮಾನಿಸಲಾಗುವುದು. ಈ ನಿಟ್ಟಿನಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಮುಖ್ಯಸ್ಥರು ಸಹಕಾರಿಸಬೇಕಾಗಿ ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

