ಇಂದಿನ ಮಕ್ಕಳು ಭವಿಷ್ಯದ ಭಾರತ, ಮಕ್ಕಳಿಗೆ ಚಿಕ್ಕಂದಿನಲ್ಲಿ ಸರಿಯಾದ ಶಿಕ್ಷಣ ತಿಳಿವಳಿಕೆ ನೀಡಿದರೆ ಅವರು ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಬಲ್ಲರು. ಈ ದೃಷ್ಟಿಯಲ್ಲಿ ನಾವು ಕಳೆದ ಹಲವಾರು ವರ್ಷಗಳಿಂದ “ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರ”ವನ್ನು ಸ್ಥಾಪಿಸಿ ಅವಕಾಶವಂಚಿತ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ.
ಈ ಕೇಂದ್ರದಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ, ಸಮವಸ್ತ್ರ, ಶಾಲಾಬ್ಯಾಗ್, ಕೊಡೆ, ಲೇಖನ ಸಾಮಗ್ರಿಗಳು ಹಾಗೂ ಇನ್ನಿತರ ಅವಶ್ಯಕ ಶಾಲಾಸಾಮಗ್ರಿಗಳನ್ನು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಪ್ರತಿವರ್ಷ ವಿತರಿಸುತ್ತಿದ್ದೇವೆ. ಅದರಂತೆ ಈ ಬಾರಿ ದಿನಾಂಕ 08-06-2025 ರಂದು ಸಂವತ್ಸರದ ಶೈಕ್ಷಣಿಕ ಶುಭಾರಂಭವನ್ನು ಹಾಗೂ ಶಾಲಾಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಮಠದ ಸಭಾಂಗಣದಲ್ಲಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ಎಮ್. ಲತಾ, ವಲಯ ಪ್ರಬಂಧಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಂಗಳೂರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಮಿ ಜಿತಕಾಮಾನಂದಜಿ, ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು ವಹಿಸಿದ್ದರು.