Saturday, June 14, 2025
Homeಬೆಂಗಳೂರುಬೆಂಗಳೂರು: ಪ್ರಿಯತಮೆಯನ್ನು ಹೋಟೆಲಿಗೆ ಕರೆಯಿಸಿ ಕೊಂದ ಟೆಕ್ಕಿ!

ಬೆಂಗಳೂರು: ಪ್ರಿಯತಮೆಯನ್ನು ಹೋಟೆಲಿಗೆ ಕರೆಯಿಸಿ ಕೊಂದ ಟೆಕ್ಕಿ!

ಬೆಂಗಳೂರು: ಕಳೆದ ಎರಡು ತಿಂಗಳುಗಳಿಂದ ಮಾತನಾಡದೆ ಅಂತರ ಕಾಯ್ದುಕೊಂಡಿದ್ದರಿಂದ ರೊಚ್ಚಿಗೆದ್ದ ಟೆಕ್ಕಿಯೊಬ್ಬ ತನ್ನ ಪ್ರಿಯತಮೆಯನ್ನು ಹೊಟೇಲ್ ವೊಂದಕ್ಕೆ ಕರೆಯಿಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿ ನಡೆದಿದೆ.

ಹೋಟೆಲ್ ನ ಕೊಠಡಿಯೊಂದರಲ್ಲಿ 36 ವರ್ಷದ ಯುವತಿಯ ಕೊಲೆಯಾಗಿದೆ. ಘಟನೆ ನಡೆದ ಎರಡು ದಿನಗಳ ನಂತರ ಯುವತಿ ಹರಿಣಿ ಶವ ಪತ್ತೆಯಾಗಿದೆ.

25 ವರ್ಷದ ಆರೋಪಿ ಯಶಸ್, ಟೆಕ್ಕಿಯಾಗಿದ್ದಾನೆ. ಆತ ಶುಕ್ರವಾರ ರಾತ್ರಿ OYO ಹೋಟೆಲ್ ನಲ್ಲಿ ಹರಿಣಿ ಹತ್ಯೆ ಮಾಡಿದ್ದಾನೆ. ಇವರಿಬ್ಬರೂ ಕೆಂಗೇರಿ ನಿವಾಸಿಗಳು ಎಂಬುದು ತಿಳಿದುಬಂದಿದೆ.

ವರ್ಷಗಳಿಂದ ಇಬ್ಬರಿಗೂ ಪರಸ್ಪರ ಸ್ನೇಹ, ಸಲುಗೆ ಇತ್ತು. ಕಳೆದ ಎರಡು ತಿಂಗಳಿಂದ ಹರಿಣಿ ಮಾತನಾಡದೆ ಟೆಕ್ಕಿಯಿಂದ ದೂರ ಉಳಿದಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಟೆಕ್ಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿರುವುದಾಗಿ ದಕ್ಷಿಣ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದರು.

RELATED ARTICLES
- Advertisment -
Google search engine

Most Popular