80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶ್ರೀ ಸರಸ್ವತಿ ಫೌಂಡೇಷನ್ ಅವರಗೆರೆ ವತಿಯಿಂದ ಅವರಗೆರೆ ಸರ್ಕಾರಿ ಪ್ರಾಥಮಿಕ ಹಿರಿಯ ಪ್ರಾಥಮಿಕ ಪಾಠಶಾಲೆಯ 7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯಾದ ಇಂದಿರಾರವರಿಗೆ `ಉತ್ತಮ ವಿದ್ಯಾರ್ಥಿನಿ’ ಪ್ರಶಸ್ತಿ ಮತ್ತು 1000 ರೂ.ಗಳ ನಗದು ನೀಡಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಮತ್ತು ಅವರಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯಾದ ಶಕ್ತಿವೇಲ್‌ರವರಿಗೆ “ಉತ್ತಮ ವಿದ್ಯಾರ್ಥಿ” ಪ್ರಶಸ್ತಿ ಮತ್ತು 1000 ರೂ. ನಗದು ನೀಡಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸರಸ್ವತಿ ಫೌಂಡೇಷನ್ ಸಂಸ್ಥಾಪಕರಾದ ಯು.ಎನ್.ಮಂಜುನಾಥ್ ಅವರಗೆರೆ, ಶಾಲಾ ಆಡಳಿತ ಮಂಡಳಿ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರುಗಳು, ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
Home Uncategorized ಶ್ರೀ ಸರಸ್ವತಿ ಫೌಂಡೇಷನ್‌ಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ

