ಶ್ರೀ ಆದಿಶಕ್ತಿ ಧರ್ಮದೇವಿ ದೇವಸ್ಥಾನದಲ್ಲಿ ಮೇ.16ರಂದು ವರ್ಷಾವಧಿ ಉತ್ಸವ ಮತ್ತು ನಾಗದೇವರಿಗೆ ಆಶ್ಲೇಷಾ ಬಲಿ ನಡೆಯಲಿರುವುದು.
ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ನವಕ ಪ್ರಧಾನ ಹೋಮ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಗಂಟೆ 10-00ರಿಂದ ನಾಗದೇವರಿಗೆ ಆಶ್ಲೇಷ ಬಲಿ, ಬೆಳಿಗ್ಗೆ ಗಂಟೆ 10.30ರಿಂದ ತುಲಾಭಾರ ಸೇವೆ ಹಾಗೂ ಮಧ್ಯಾಹ್ನ ಗಂಟೆ 12.30ಕ್ಕೆ ಶ್ರೀ ದೇವಿಗೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ , ಮಧ್ಯಾಹ್ನ ಗಂಟೆ 1ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 6.00ರಿಂದ ಶ್ರೀ ದೇವಿಯ ಭಜನಾ ಕಾರ್ಯಕ್ರಮ ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ, ರಾತ್ರಿ ಗಂಟೆ 9.00ರಿಂದ ಶ್ರೀ ದೇವಿಯ ಅಭಯ ದರ್ಶನ ಮತ್ತು ರಕ್ಷಾಫಲ ಕೊಡುಗೆ ಗಣಗಳಿಗೆ ತೃಪ್ತಿಪಡಿಸಿ ಮಂಗಲೋತ್ಸವ ಜರುಗಲಿದೆ.

