ಪೊಲೀಸ್ ಪೇದೆಯ ಕುಟುಂಬಕ್ಕೆ 1.45 ಕೋಟಿ ವಿಮಾ ಚೆಕ್ ಹಸ್ತಾಂತರ

0
11

ಉಡುಪಿ : ಕರ್ತವ್ಯದಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿ ಅರ್ಜುನ ಶಂಕರ ನೆಲ್ಲೂರ ಅವರ ಅವಲಂಬಿತರಿಗೆ ಎಸ್.ಬಿ.ಐ. ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ 1.45 ಕೋಟಿ ರೂ. ಮೊತ್ತದ ವಿಮಾ ಚೆಕ್ ಹಸ್ತಾಂತರ ಕಾಯಕ್ರಮ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆಯಿತು.

ಎಸ್ ಬಿ ಐ ಪ್ರಾದೇಶಿಕ ವ್ಯವಹಾರ ಕಚೇರಿ ರೀಜನಲ್ ಮ್ಯಾನೇಜರ್ ಬಿ.ಪ್ರಕಾಶ್ ಅಡಿಗ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸಮ್ಮುಖದಲ್ಲಿ ಸಿಬ್ಬಂದಿ ಅವಲಂಬಿತರಿಗೆ ಈ ವೈಯಕ್ತಿಕ ಅಪಘಾತ ವಿಮೆಯ ಚೆಕ್ಕನ್ನು ಹಸ್ತಾಂತರಿಸಿದರು. ಈ ಸಂದಭದಲ್ಲಿ ಮಾತನಾಡಿದ ಪ್ರಕಾಶ ಅಡಿಗ, ಪೊಲೀಸ್ ಇಲಾಖೆ ಮತ್ತು ಎಸ್.ಬಿ.ಐ. ನಡುವಿನ ಒಪ್ಪಂದದಂತೆ ಕರ್ತವ್ಯದ ವೇಳೆ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಈ ವಿಮಾ ಸೌಲಭ್ಯ ದೊರಕಿದೆ.

ಇಂಥ ವಿಮಾ ಯೋಜನೆಗಳು ಎಲ್ಲಾ ಎಸ್‌ಬಿಐ ಶಾಖೆಗಳಲ್ಲಿ ಲಭ್ಯವಿದ್ದು, ಸದುಪಯೋಗವನ್ನು ಪೊಲೀಸ್ ಇಲಾಖೆಯ ಸಿಬ್ಬಂದಿ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು. ಎಸ್.ಬಿ.ಐ. ಮುಖ್ಯ ವ್ಯವಸ್ಥಾಪಕ ಕೀಳಂಜೆ ಕೃಷ್ಣರಾಜ ಭಟ್, ಮಲ್ಪೆ ಶಾಖೆಯ ಮೆನೇಜರ್ ರಾಜೇಶ್ ಗಂಗೊಳ್ಳಿ, ಅಧಿಕಾರಿಗಳಾದ ಶ್ರೀನಿವಾಸ್, ಪ್ರಣವ್ ಪೈ , ತನ್ಮಯ್ ಉಪಸ್ಥಿತರಿದ್ದರು. 2023-24ನೇ ಸಾಲಿನಲ್ಲಿ ಸಿ.ಎಸ್.ಪಿ. ಜಿಲ್ಲಾ ನಿಯಂತ್ರಣ ಕೊಠಡಿ, ಉಡುಪಿ ಘಟಕದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅರ್ಜುನ ನೆಲ್ಲೂರ ಹಾವೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು.