ವಿದ್ಯಾಭಾರತಿ ಉಡುಪಿ ವತಿಯಿಂದ “ಅಂಗಳ–2026” ಸನ್ಮಾನ: ಸಾಧಕ ನವನೀತ್‌ಗೆ ಗೌರವ ಸಲ್ಲಿಕೆ

0
63

ಸಾಧಕ ತನ್ನ ಸಾಧನೆಯ ಮೂಲಕ ತಂದೆ ತಾಯಿ ಶಾಲೆ ಸಮಾಜಕ್ಕೆ ಹೆಸರನ್ನು ತಂದನು.ಜಗತ್ತಿನಲ್ಲಿ ಪವಿತ್ರವಾದ ಸ್ಥಳಗಳು ಎರಡು. ಅದಾವುದೆಂದರೆ ಅಮ್ಮನ ಮಡಿಲು ಇನ್ನೊಂದು ಅಪ್ಪನ ಭುಜ ಎಂದು ಅಧ್ಯಕ್ಷ ಪಾಂಡುರಂಗ ಪೈ ಸಿದ್ಧಾಪುರ ಮಾತನಾಡಿದರು.
ಶ್ರೀರಾಮ ವಿದ್ಯಾ ಕೇಂದ್ರ ಕೋಡಿ ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿ ನವನೀತ್.ಆರ್ ಇವರಿಗೆ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಅಂಗಳ – 2026 ಸನ್ಮಾನ ಕಾರ್ಯಕ್ರಮ ನಿಸರ್ಗ ಹೌಸ್ ,ಕೋಡಿ ರೋಡ್ ಹಂಗ್ಳೂರು ವಿದ್ಯಾರ್ಥಿಯ ಸ್ವಗೃಹದಲ್ಲಿ ನಡೆಯಿತು .
ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಸಂಸ್ಥೆಗೆ ಟಾಪರ್ ಆಗಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ .
ಅಂಗಳ -2026. ಸನ್ಮಾನ ಸಮಾರಂಭದ ವೇದಿಕೆಯಲ್ಲಿ ಸಾಧಕನ ತಂದೆ ರವಿ .ಹೆಚ್ .ಆರ್. ತಾಯಿ ಸುಗುಣ .ಬಿ.ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರು ನಾಗೇಶ್ ಕಾಮತ್ ಕೋಡಿ,ಮುಖ್ಯೋಪಾಧ್ಯಾಯರು ಜೀತೇಂದ್ರ ಉಪಸ್ಥಿತರಿದ್ದರು .
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ ,ಚಾರ ಇವರು ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು .
ಕಾರ್ಯಕ್ರಮದಲ್ಲಿ ಸಾಧಕನ ಕುಟುಂಬಸ್ಥರು,ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here