ಬಂಟ್ವಾಳ :ಶ್ರೀ ವೆಂಕಟರಮಣಸ್ವಾಮಿ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ಪದವಿ ಕಾಲೇಜಿನಲ್ಲಿ ಭಾರತ ರತ್ನ ಡಾ.ಬಿ.ಆರ್‌ಅಂಬೇಡ್ಕರ್ ಜನ್ಮದಿನಾಚರಣೆ ಆಚರಿಸಲಾಯಿತು.
ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ವೆಂಕಟರಮಣಸ್ವಾಮಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ, ‘ಅಂಬೇಡ್ಕರ್‌ಓರ್ವ ಮಹಾನ್ ಸಮಾಜ ಸುಧಾರಕನಾಗಿದ್ದು, ಭಾರತದ ಸಂವಿಧಾನವನ್ನು ಬರೆದು, ನವಭಾರತದ ನಿರ್ಮಾಣದಲ್ಲಿಇವರು ಮಹತ್ವದ ಪಾತ್ರನಿರ್ವಹಿಸಿದ್ದಾರೆ’ ಎಂದರು.
ದ್ವಿತೀಯ ಕಲಾ ಪದವಿಯ ಕು|ಸ್ಪೂರ್ತಿಅಂಬೇಡ್ಕರ್ ಜೀವನ ಸಾಧನೆಗಳ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಡಿ.ಮಂಚಿ ಮಾತನಾಡಿ ‘ಅಂಬೇಡ್ಕರ್ ಮಹಾಜ್ಞಾನಿಯಾಗಿದ್ದು, ಸಂವಿಧಾನ ಶಿಲ್ಪಿಯಾದ ಇವರುಬರೆದ ಸಂವಿಧಾನವು ಪವಿತ್ರ ಹಾಗೂ ಮಾರ್ಗದರ್ಶಕಗ್ರಂಥವಾಗಿದ್ದು, ಇಡೀ ದೇಶದ ಭವಿಷ್ಯವನ್ನು ಇವರು ಇದರಲ್ಲಿ ದಾಖಲಿಸಿದ್ದು, ಸಮಾನತೆಯ ಹರಿಕಾರರಾಗಿರುವ ಇವರ ಜೀವನ, ವ್ಯಕ್ತಿತ್ವ ಎಲ್ಲಾ ಭಾರತೀಯರಿಗೂ ಆದರ್ಶ ಪ್ರಾಯವಾದುದೆಂದರು.
ಕಾರ್ಯಕ್ರಮದಲ್ಲಿ, ಬಂಟ್ವಾಳ ರಘರಾಮ ಮುಕುಂದ ಪ್ರಭು ಸೆಂಟನರಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಪೂರ್ಣೆಶ್ವರಿ ಭಟ್ ಹಾಗೂ ಎಸ್.ವಿ.ಎಸ್. ಇಂಗ್ಲೀಷ್ ಮೀಡಿಯಮ್ ಸ್ಕೂಲ್, ವಿದ್ಯಾಗಿರಿ, ಬಂಟ್ವಾಳ, ಇದರ ಸಹಶಿಕ್ಷಕಿ, ಗಾಯತ್ರಿಯವರು ಪಾಲ್ಗೊಂಡಿದ್ದರು.
ಡಾ.ಸುಯೋಗ ವರ್ಧನ್‌ಡಿ.ಎಂ ಸ್ವಾಗತಿಸಿ, ಪ್ರಾಸ್ತಾವಿಕಮಾತನಾಡಿದರೆ, ಡಾ.ವಿನಯ್‌ಕುಮಾರ್ ಸಿ ಧನ್ಯವಾದವಿತ್ತರು. ಕು|ಪ್ರಾಜ್ಞವಿ ಕಾರ್ಯಕ್ರಮ ನಿರೂಪಿಸಿದರು.

