ಲೋಕಾಯುಕ್ತರ ಸಾರ್ವಜನಿಕ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸೋಮವಾರದಂದು ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರಗಿತು.
ತುಂಬೆ ಡ್ಯಾಮ್ ಸಂತ್ರಸ್ತ ರೈತರಿಗೆ ವರತೆ ಪ್ರದೇಶಕ್ಕೆ ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ನ್ಯಾಯೋಚಿತ ಸೂಕ್ತ ಪರಿಹಾರ ದೊರಕದಿರುವ ಬಗ್ಗೆ ಸಜೀಪ ಮುನ್ನೂರು ಗ್ರಾಮದಲ್ಲಿ ಸಾರ್ವಜನಿಕ ಹಿಂದೂ ರುದ್ರ ಭೂಮಿಗೆ ಸರಕಾರ ಎರಡು ಸ್ಥಳ ಮಂಜೂರು ಆಗಿದ್ದರು ಈತನಕ ಸ್ಮಶಾನ ನಿರ್ಮಾಣ ಆಗದಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್ ಡೆಂಜಿ ಪಾಡಿ ರಾಜ ಕಾಲುವೆ ಒತ್ತುವರಿ ಇಂದ ನೇತ್ರಾವತಿ ನದಿಗೆ ನೀರು ಹರಿದು ಹೋಗುವ ತೋಡು ಹೂಳು ತುಂಬಿದ್ದು ನರಿ ಕೊಂಬು ಗ್ರಾಮದ ನಾಯಿಲ ಪ್ರದೇಶದ ರೈತರ ಸುಮಾರು 200 ಎಕರೆ ಅಧಿಕ ಕೃಷಿ ಭೂಮಿ ನೀರು ತುಂಬಿ ಪ್ರತಿವರ್ಷ ನಷ್ಟವನ್ನು ಅನುಭವಿಸುತ್ತಿದ್ದು ರಾಜ ಕಾಲುವೆ ಒತ್ತುವರಿ ತೆರವು ಗೊಳಿಸಿ ತೋಡಿನ ಹೂಳೆತ್ತುವ ಬಗ್ಗೆ ಸಜೀಪ ಮುನ್ನೂರುಗ್ರಾಮದ ಬೆಂ ಕ್ಯಾ_ ಅಲಾಡಿ ಮುಖ್ಯ ರಸ್ತೆಯಲ್ಲಿ ಮಂಜಿನಡ್ಕ ಎಂಬಲ್ಲಿ ದಿಡೀರ್ ಆಗಿ ಮೋರಿ ನಿರ್ಮಾಣ ಮಾಡಿ ಕಾಮಗಾರಿ ಅರ್ಧಂಬರ್ಧ ನಡೆದಿದ್ದು ರಸ್ತೆಯಲ್ಲಿ ಮಣ್ಣಿನ ರಾಶಿ ಹಾಕಿದ್ದು ವಾಹನ ಸಂಚಾರಕ್ಕೆ ತೊಡಕ್ಕಾಗುತ್ತಿರುವ ಬಗ್ಗೆ. ಸುಜೀಪ ಮುನ್ನೂರು ಗ್ರಾಮದ ಶ್ರೀ ಮಹಾಕಾಳಿ ದೇವಸ್ಥಾನ ಸಂಪರ್ಕ ರಸ್ತೆಗೆ 2021 _22ನೇ ಸಾಲಿನ ಮಳೆ ಹಾನಿ ಪರಿಹಾರ ಲೆಕ್ಕ ಶೀರ್ಷಿಕೆ 5054 ಯೋಜನೆಯಡಿ ರೂಪಾಯಿ 40,00,000 ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕದಿರುವ ಬಗ್ಗೆ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಲಿಖಿತ ಮನವಿ ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.