ಬಂಟ್ವಾಳ: ವಿವಿಧೆಡೆ ನಾಗರಪಂಚಮಿ ಆಚರಣೆ

0
193

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ

ಬಂಟ್ವಾಳ: ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಸಜೀಪಮೂಡ ಇಲ್ಲಿ ನಾಗರಪಂಚಮಿಯ ಅಂಗವಾಗಿ ಕ್ಷೇತ್ರದ ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ, ನಾಗತಂಬಿಲವು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು. ಬಂಟ್ವಾಳ ತಹಸಿಲ್ದಾರ್ ಅರ್ಚನಾ ಭಟ್ ಪ್ರಸಾದ ಸ್ವೀಕರಿಸಿದರು. ನೂರಾರು ಭಕ್ತರು ಪಾಲ್ಗೊಂಡಿದ್ದರು.

ಸಜೀಪ ಮೂಡ ಗ್ರಾಮದ ಮೀಸೆ ನಾಗಬನ

ಸಜೀಪ ಮೂಡ ಗ್ರಾಮದ ಮೀಸೆ ನಾಗಬನದಲ್ಲಿ ನಾಗರ ಪಂಚಮಿ ಅಂಗವಾಗಿ ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕವು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡುಪು

ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡುಪು ಸಜಿಪ ಮುನ್ನೂರು ನಾಗಬನದಲ್ಲಿ ಶ್ರೀರಘಟ್ಟೇಶ್ವರಿ ಹಾಗೂ ಶ್ರೀನಾಗ ದೇವರಿಗೆ ಫಲ ಪಂಚಾಮೃತ ಅಭಿಷೇಕ ಪ್ರಸನ್ನ ಪೂಜೆ ಸಹಿತ ನಾಗತಂಬಿಲ ಸೇವೆ ಜರಗಿತು.

ಜಾಡಕೋಡಿ ಶ್ರೀ ನಾಗರಾಜ ನಾಗಕನ್ನಿಕ ರಕ್ತೇಶ್ವರಿ ಗುಳಿಗ ಕ್ಷೇತ್ರ

ಸಜೀಪ ಮೂಡ ಜಾಡಕೋಡಿ ಶ್ರೀ ನಾಗರಾಜ ನಾಗಕನ್ನಿಕ ರಕ್ತೇಶ್ವರಿ ಗುಳಿಗ ಕ್ಷೇತ್ರದಲ್ಲಿ ನಾಗರ ಪಂಚಮಿ ಪ್ರಯುಕ್ತ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ ನಾಗತಂಬಿಲ ಸೇವೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಜರಗಿತು.

LEAVE A REPLY

Please enter your comment!
Please enter your name here