ಬಂಟ್ವಾಳ : ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಯೋಗಿ ಕೌಸ್ತುಭ ಕರ್ಮಯೋಗಿ ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ದಿವ್ಯಉಪಸ್ಥಿತಿಯಲ್ಲಿ ವರ್ಷಾವಧಿ ನೇಮ ಹಾಗೂ ಕೋಲೋತ್ಸವವು ಮಾ. 4ರಂದು ರಾತ್ರಿ ಜರುಗಲಿದೆ.
ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮ ಹಾಗೂ ಶ್ರೀ ಕಲ್ಲುರ್ಟಿ, ಗುಳಿಗ, ಕೊರಗಜ್ಜ ದೈವಗಳ ವರ್ಷಾವಧಿ ಕೋಲೋತ್ಸವ ನಡೆಯಲಿದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ಕೃಪೆಗೆ ಪಾತ್ರರಾಗುವಂತೆ ಕ್ಷೇತ್ರದ ಆಡಳಿತ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

