ಹೆಬ್ರಿ : ಪಾಂಡುರಂಗರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವಕಾಲೇಜಿನಲ್ಲಿಯೋಗ ದಿನಾಚರಣೆ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕ ಯೋಗಕೇಂದ್ರ ಬ್ರಹ್ಮಾವರದಯೋಗ ಗುರುಗಳಾದ ಮೋಹನ್‌ಕುಮಾರ್ ಮತ್ತುಯೋಗಾತರಬೇತುದಾರರಾದ ಭಾರತಿ ಯೋಗಾಭ್ಯಾಸಗಳನ್ನು ಕಲಿಸಿದರು.
ಯೋಗ ಗುರುಗಳಾದ ಮೋಹನ್‌ಕುಮಾರ್ ಅಷ್ಟಾಂಗ ವೇದದ ಪ್ರಾಮುಖ್ಯತೆಯನ್ನು ತಿಳಿಸಿದರು.
ಸ್ನಾನ, ಧ್ಯಾನ, ವ್ಯಾಯಾಮದೇಹದ ಲವಲವಿಕೆಯನ್ನು ಸದಾ ಕಾಪಾಡಿಕೊಳ್ಳುತ್ತವೆ ಎಂದರು.ಪ್ರಾಂಶುಪಾಲರಾದ ಪ್ರಕಾಶ್‌ಜೋಗಿ ಸಂಪನ್ಮೂಲ ವ್ಯಕ್ತಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ವಿದ್ಯಾರ್ಥಿಗಳಾದ ಪ್ರತೀಕ್ಷ ನಿರೂಪಿಸಿ, ಸಹನಿ ಸ್ವಾಗತಿಸಿ, ಚಿರಾಗ್‌ಆರ್ ಪೂಜಾರಿ ವಂದಿಸಿದರು.

