ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು 2005–2006ನೇ ಸಾಲಿನ ಹಳೆ ವಿದ್ಯಾರ್ಥಿಗಳ “ಸ್ಮೃತಿ ಸಂಭ್ರಮ” ಎಂಬ 20 ವರ್ಷಗಳ ಸವಿ ನೆನಪಿನ ಕಾರ್ಯಕ್ರಮ

0
17

ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಲೇಜು ಬೈಂದೂರು 2005–2006ನೇ ಸಾಲಿನ ಹಳೆ ವಿದ್ಯಾರ್ಥಿಗಳ “ಸ್ಮೃತಿ ಸಂಭ್ರಮ” ಎಂಬ 20 ವರ್ಷಗಳ ಸವಿ ನೆನಪಿನ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ನಡೆಯಿತು .

ಡಾ.ರವಿರಾಜ್ ಶೆಟ್ಟಿ ಮತ್ತು ಪ್ರಾಧ್ಯಾಪಕ ವೃಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮತ್ತೆ ಮೆಲುಕು ಹಾಕುವ ಇಂತಹ ಕಾರ್ಯಕ್ರಮಗಳು ಸ್ನೇಹ ಮತ್ತು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ , 20 ವರ್ಷಗಳ ಬಳಿಕ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಒಂದಾಗಿ ಕಾಲೇಜಿನೊಂದಿಗೆ ಬಾಂಧವ್ಯ ಉಳಿಸಿಕೊಂಡಿರುವುದು ಶ್ಲಾಘನೀಯ, ಎಂದರು.

ಸಂಸ್ಥೆಯ ಹಳೆ ವಿದ್ಯಾರ್ಥಿ ಅಜಿತ್ ಎ ಬಿಜೂರು ಅವರು ಮಾತನಾಡಿ 20 ವರ್ಷಗಳ ಬಳಿಕ ನಾವೆಲ್ಲರೂ ಒಂದೇ ವೇದಿಕೆಯಲ್ಲಿ ಒಟ್ಟಾಗಿರುವುದು ಅವಿಸ್ಮರಣೀಯ ಕ್ಷಣವಾಗಿದೆ. ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮತ್ತೆ ಮೆಲುಕು ಹಾಕಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸಿದೆ . ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲಾ ಸ್ನೇಹಿತರು ಹಾಗೂ ಪ್ರಾಧ್ಯಾಪಕ ವೃಂದದವರಿಗೆ ಕೃತಜ್ಞತೆ ಸಲ್ಲಿಸಿದರ , ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು.

ಹಳೆ ವಿದ್ಯಾರ್ಥಿ ಅನುಪಮ ಪ್ರಭು ಮಾತನಾಡಿ , ಹಲವು ವರ್ಷಗಳ ಬಳಿಕ ಸ್ನೇಹಿತರು ಹಾಗೂ ಗುರುಗಳನ್ನು ಮತ್ತೆ ಭೇಟಿಯಾದುದು ಮನಸಿಗೆ ಅಪಾರ ಸಂತೋಷ ತಂದಿದೆ ಇಂತಹ ಸವಿ ನೆನಪುಗಳ ಕಾರ್ಯಕ್ರಮಗಳು ಹಳೆಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ ಜೀವನಪೂರ್ತಿ ಮರೆಯಲಾಗದ ಅವಿಸ್ಮರಣೀಯ ಸಂತೋಷದ ಕ್ಷಣಗಳನ್ನು ನೀಡುತ್ತವೆ ಎಂದರು .

ತಮಗೆ ಶಿಕ್ಷಣ ನೀಡಿದ ಗುರುಗಳಿಗೆ ಹಳೆ ವಿದ್ಯಾರ್ಥಿಗಳು ಗೌರವಪೂರ್ವಕವಾಗಿ ಗುರುವಂದನೆ ಸಮರ್ಪಿಸಿದರು. ವಿದ್ಯಾರ್ಥಿ ಜೀವನದಲ್ಲಿ ಮಾರ್ಗದರ್ಶನ ನೀಡಿದ ಪ್ರಾಚಾರ್ಯರುಗಳಿಗೆ ಸೇವೆಯನ್ನು ಸ್ಮರಿಸಿ ಕೃತಜ್ಞತೆ ವ್ಯಕ್ತಪಡಿಸಿದರು. ಈ ಕ್ಷಣವು ಭಾವನಾತ್ಮಕ ಹಾಗೂ ಸ್ಮರಣೀಯವಾಗಿದೆ

ಹಳೆ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು. ಡಾ.ರಾಜೇಂದ್ರ ಎಸ್ ನಾಯಕ್ , ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಈ ಸಂದರ್ಭದಲ್ಲಿ ಪ್ರಾಧ್ಯಾಪಕರುಗಳಾದ ರಾಮರಾಯರ ಆಚಾರ್ , ದಾಮೋದರ್ ಗೌಡ , ಡಾ.ಉದಯ್ ಕುಮಾರ್ ಶೆಟ್ಟಿ ಡಾ.ಸೋಮಶೇಖರ್ , ಪ್ರಸನ್ನ ಕುಮಾರ್, ಡಾ.ಗುಲಾಬಿ ಪೂಜಾರಿ , ಪಾಡುರಂಗ , ಕಮಲಾ ಹಾಗೂ ಕೃಷ್ಣ ಗೊಂಡ. ಸಂಸ್ಥೆಯ ಪ್ರಸ್ತುತ ಪ್ರಾಧ್ಯಾಪಕರುಗಳಾದ ಡಾ.ಆನಂದ. ಸಿ , ಮಮತಾ ಪೂಜಾರಿ , ಮಣಿಕಂಠ ,CDMC ಉಪಾಧ್ಯಕ್ಷರಾದ ಮುತ್ತಯ್ಯ ಪೂಜಾರಿ ಹಾಗೂ ಹಳೆ ವಿದ್ಯಾರ್ಥಿ ಉಪಸ್ಥಿತರಿದ್ದರು.

ಅಜಿತ್ ಎ ಬಿಜೂರ್ ಸ್ವಾಗತಿಸಿದರು. ಗುರುಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಚಿತ್ರಣವನ್ನು ನೀಡಿದರು ಮಾರುತಿ ಕಾರ್ಯಕ್ರಮವನ್ನು ನಿರೂಪಿಸಿದರು.
ರಾಮ ಮೊಗವೀರ ವಂದಿಸಿದರು.

LEAVE A REPLY

Please enter your comment!
Please enter your name here