ಅಕ್ಟೋಬರ್ 11ರಿಂದ ಅಕ್ಟೋಬರ್ 21 ರವರೆಗೆ ಬೆಳ್ಮಣ್ಣು ನವರಾತ್ರಿ ಉತ್ಸವ

0
31

ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವವು ಅಕ್ಟೋಬರ್ 11ರಿಂದ ಅಕ್ಟೋಬರ್ 21ರವರೆಗೆ ಜರಗಲಿದೆ.

ಅಕ್ಟೋಬರ್ 11ರಂದು ಆದಿತ್ಯವಾರ ಸಂಜೆ ಗಂಟೆ 6ಕ್ಕೆ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಉಡುಪಿ ದರ್ಪಣ ನೃತ್ಯ ಸಂಸ್ಥೆಯ ವಿದುಷಿ ರಕ್ಷಾ ಮತ್ತು ರಮ್ಯಾ ಇವರ ಬಳಗ ದೇವರಿಂದ “ನೃತ್ಯ ಕಲರವ” ಕಾರ್ಯಕ್ರಮ, ಸಂಜೆ ಗಂಟೆ 6. 30ಕ್ಕೆ ಬೆಳ್ಮಣ್ಣು ಪುನಾರು ಶ್ರೀ ಶಾಸ್ತ್ರವು ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಮತ್ತು ಬೆಳ್ಮಣ್ಣು ಭಜನಾ ಮಂಡಳಿ ಅವರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 12ರಂದು ಸೋಮವಾರ ಸಂಜೆ ಗಂಟೆ 6ಕ್ಕೆ ಖ್ಯಾತ ಭಾಗವತರಾದ ಡಾ. ಪ್ರಖ್ಯಾ ಶೆಟ್ಟಿ ಅಳಿಕೆ ಇವರ ಸಂಯೋಜನೆಯಲ್ಲಿ ಸುಪ್ರಸಿದ್ಧ ಅತಿಥಿ ಕಲಾವಿದರಿಂದ “ಪುಣ್ಯಕೋಟಿ” ಯಕ್ಷಗಾನ ಪ್ರದರ್ಶನ, ಸಂಜೆ ಗಂಟೆ 6:30ಕ್ಕೆ ಶ್ರೀ ವನದುರ್ಗ ಭಜನಾ ಮಂಡಳಿ, ಹಳೆ ವಿದ್ಯಾರ್ಥಿ ಸಂಘ ಹೊಸಮಾರು ಬೆಳ್ಮಣ್ಣು ಮತ್ತು ಮಹಿಳಾ ಭಜನಾ ಮಂಡಳಿ ಬೆಳ್ಮಣ್ಣು ಇವರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 13ದಂದು ಮಂಗಳವಾರ ಶ್ರೀ ಶಾರದ ನಾಟ್ಯಾಲಯ ಕುಲಾಯಿ ಹೊಸಬೆಟ್ಟು ಇದರ ನಿರ್ದೇಶಕಿ ವಿದುಷಿ ಭಾರತಿ ಸುರೇಶ್ ಇವರ ಶಿಷ್ಯರಿಂದ “ನೃತ್ಯ ಸಂಭ್ರಮ” ಹಾಗೂ ಸಂಜೆ ಗಂಟೆ 6:30 ರಿಂದ ಬೆಳ್ಮಣ್ಣು ಪುನಾರು ಶ್ರೀ ಶಾಸ್ತಾವು ಬ್ರಹ್ಮಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 14ರಂದು ಬುಧವಾರ ಸಂಗೀತ ವಿದುಷಿ ಶ್ರೀಮತಿ ವಿಜಯ ಭಟ್ ನಿರ್ದೇಶನದ ನಾದ ಸುಧಿ ಸಂಗೀತ ಕಲಾ ಮಂದಿರ ಬೆಂಗಳೂರು ಇವರಿಂದ “ಶಾಸ್ತ್ರೀಯ ಗಾನ ಸಂಗೀತ” ಹಾಗೂ ಪಡುಬೆಳ್ಮಣ್ಣು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿಯವರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 15ರಂದು ಗುರುವಾರ ಮಂಗಳೂರು ಗಾನ ನೃತ್ಯ ಅಕಾಡೆಮಿಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯರಾದ ಕುಮಾರಿ ಶ್ರಾವಣಿ ಕೆ. ಭಟ್ ಮತ್ತು ದ್ವಿತಿ ಶೆಟ್ಟಿಯವರಿಂದ “ನೃತ್ಯಾರ್ಪಣಂ” ಕಾರ್ಯಕ್ರಮ ಹಾಗೂ ಬೋಳ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ಭಜನಾ ಮಂಡಳಿ ಅವರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 16ರಂದು ಶುಕ್ರವಾರ ಖ್ಯಾತ ಸಂಗೀತ ಕಲಾವಿದರಾದ ಬೋಳ ನಮಿತಾ ಮತ್ತು ಬಳಗದವರಿಂದ “ಭಕ್ತಿ ರಸಮಂಜರಿ” ಕಾರ್ಯಕ್ರಮ ಹಾಗೂ ಮುಲ್ಲಡ್ಕ ನಾನಿಲ್ತಾರು ಶ್ರೀ ದುರ್ಗಾ ಭಜನಾ ಮಂಡಳಿ ಅವರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 17ರಂದು ಶನಿವಾರ ವಿದ್ವಾನ್ ರಾಜೇಶ್ ರಾವ್ ಬಾಗಲೋಡಿ ಇವರ ಶಿಷ್ಯವೃಂದದವರಿಂದ “ಕೊಳಲು ವಾದನ” ಕಾರ್ಯಕ್ರಮ ಹಾಗೂ ಬೋಳ ಮಲ್ಲಿಗೆ ಶ್ರೀ ಬ್ರಹ್ಮ ಬೈದರ್ಕಳ ಭಜನಾ ಮಂಡಳಿಯವರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 18ರಂದು ಆದಿತ್ಯವಾರ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಶೋಭಾನೆ ಬಳಗದವರಿಂದ ಪೌರಾಣಿಕ ನಾಟಕ “ಚೂಡಾಮಣಿ” (ಲಂಕಾ ದಹನ) ಹಾಗೂ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 19 ರಂದು ಸೋಮವಾರ ನಂದಳಿಕೆ ವಿಶಾಲ ಯಕ್ಷಗಾನ ಬಳಗದವರಿಂದ “ವಿದುರಾದತಿಥ್ಯ- ತಾಳಮದ್ದಲೆ” ಹಾಗೂ ಬೋಳ ಪೊಸರ್ಮ ಶ್ರೀ ಧೂಮಾವತಿ ಭಜನಾ ಮಂಡಳಿಯವರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 20ರಂದು ಮಂಗಳವಾರ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ, ಪಡುಬಿದ್ರಿ ಮಧ್ವ ನಗರದ ತರಂಗಿಣಿ ಮಿತ್ರವೃಂದ ಇವರಿಂದ ಭಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಪ್ರತಿದಿನ ರಾತ್ರಿ ಗಂಟೆ 8ಕ್ಕೆ ಮಹಾಪೂಜೆ ನಂತರ ಅನ್ನ ಸಂತರ್ಪಣೆ ಜರಗಲಿದೆ.

ಅಕ್ಟೋಬರ್ 21ರಂದು ಬುಧವಾರ ವಿಜಯದಶಮಿಯ ಪ್ರಯುಕ್ತ ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ಜರಗಲಿದೆ ಎಂದು ಪತ್ರಿಕಾ ಪ್ರಕಟಣೆಗೆ ಶ್ರೀ ಕ್ಷೇತ್ರದ ಆಡಳಿತ ಮುಕ್ತೇಸರರಾದ ವೇದಮೂರ್ತಿ ಶ್ರೀ ಬಿ.ಕೆ. ವಿಘ್ನೇಶ್ ಭಟ್ ಅವರು ತಿಳಿಸಿದ್ದಾರೆ.