ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಬೆಳ್ತಂಗಡಿ ವಲಯ ಮತ್ತು ಕ್ಷೇತ್ರ ಸಮಿತಿಯ ವತಿಯಿಂದ, ಮಂಗಳೂರಿನ ಎ.ಜೆ. ಡೆಂಟಲ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ದಂತ ಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರವು ಮೇ 17, 2026ರ ಭಾನುವಾರ ಬೆಳಿಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಕಲಾಮಂದಿರ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಶಿಬಿರದಲ್ಲಿ ಉಚಿತ ದಂತ ಪರೀಕ್ಷೆ, ಡೆಂಟಲ್ ಫಿಲ್ಲಿಂಗ್‌ಗಳು ಹಾಗೂ ಅಗತ್ಯವಿರುವವರಿಗೆ ವೀಲ್‌ಚೇರ್ ವಿತರಣೆ ಕೂಡ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೈಲರ್ ಅಸೋಸಿಯೇಶನ್ ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್ ವಹಿಸಲಿದ್ದು, ಉದ್ಘಾಟನೆಯನ್ನು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಸುವರ್ಣ ನೆರವೇರಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಘಟಕರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
- 9844066396
- 8971822355
- 9008851053
ಈ ಶಿಬಿರಕ್ಕೆ ಸನ್ನಿಧಿ ಮೆಡಿಕಲ್ಸ್, ಸಂತೆಕಟ್ಟೆ ಶುಭ ಹಾರೈಸಿದೆ.

