ಕಾರ್ಕಳ: ವಕ್ರಾಂಗಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಕಾರ್ಕಳದ ಶ್ರೀನಿವಾಸ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಕಾರ್ಕಳದ ತಾಜ್ ಡೆಕೊಲಿಂಕ್ ಪ್ರಾಯೋಜಕತ್ವದಲ್ಲಿ ಎಟಿಎಂ, ಗೂಗಲ್ ಪೇ, ಫೋನ್ ಪೇ ಇತ್ಯಾದಿಗಳ ನಗದು ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಸೇವಾ ಕೇಂದ್ರದ ಉದ್ಘಾಟನೆಯನ್ನು ಕಾರ್ಕಳ ಪಡು ತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಜಯರಾಮ ಪ್ರಭುರವರು ಉದ್ಘಾಟನೆಯನ್ನು ನೆರವೇರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಜಯಪ್ರಕಾಶ್ ಶೆಟ್ಟಿ ಉದ್ಯಮಿ, ವೆಂಕಟೇಶ್ ಕಾಮತ್, ಪುರಸಭಾ ಮಾಜಿ ಮುಖ್ಯಾಧಿಕಾರಿ ಗೋಪಾಲ್ ಕೃಷ್ಣ ಶೆಟ್ಟಿ,ಆರ್. ವರದರಾಯ ಪ್ರಭು ಶಿವ ಜಾಹಿರಾತು ಸಂಸ್ಥೆಯ ಮಾಲಕ , ಜಿನೇಶ್ ಕುಮಾರ್ ಬಜಗೋಳಿ , ಮತ್ತು ವಕ್ರಾಂಗಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಭಿಜಿತ್ ಜೈನ್, ಉಪಸ್ಥಿತರಿದ್ದರು, ಸಂಸ್ಥೆಯ ಎಂ. ಗಣಪತಿ ಪೈ, ಶ್ರೀಮತಿ ಗೀತಾ ಪೈ,ಪ್ರಿಯಾಂಕ ಪೈ, ಎಂ.ಜಗನ್ನಾಥ ಪೈ, ಶ್ರೀಮತಿ ಜ್ಯೋತಿ ಪೈ, ಶಿವಾನಂದ ಶೆಣೈ, ಬಿ. ರಜತ್ ಶೆಣೈ, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.ಎಟಿಎಂ ಉದ್ಘಾಟನೆಯನ್ನು ಹಣ ತೆಗೆಯುವ ಮೂಲಕ ಜಗನ್ನಾಥ ಪೈ ಯವರು ಉದ್ಘಾಟಿಸಿದರು. ಗೂಗಲ್ ಪೇ ಸ್ಕೆನರ್ ಬಳಸಿ ವರದರಾಯ ಪ್ರಭು ರವರು ಹಣವನ್ನು ತೆಗೆಯುವ ಮೂಲಕ ಚಾಲನೆ ನೀಡಿದರು.

