ಬೆಂಗಳೂರು ಟು ಗೋವಾ ಮಧುಚಂದ್ರಕ್ಕೆ ಕರೆದೊಯ್ಯ ಪ್ರಿಯಕರ ಪ್ರೇಯಿಸಿಯನ್ನು ಹತ್ಯೆಗೈದ ಘಟನೆ ನಡೆದಿದೆ. ದೇಶವನ್ನೇ ಬೆಚ್ಚಿಬೀಳಿಸಿದ್ದ ರಾಜಾರಘುವಂಶಿ ಹನಿಮೂನ್ ಪ್ರಕರಣದಲ್ಲಿ ಪತ್ನಿ ಪತಿಯ ಹತ್ಯೆ ಮಾಡಿದ್ರೆ ಇಲ್ಲಿ ಉಲ್ಟಾ ಹೊಡೆದಿದೆ. ಮಧುಚಂದ್ರಕ್ಕೆ ಕರೆದೊಯ್ಯ ಪ್ರಿಯಕರ ಪ್ರೇಯಿಸಿಯನ್ನು ಕೊಲೆ ಮಾಡಿದ್ದಾನೆ.
ಬೆಂಗಳೂರು ಮೂಲದ ಯುವತಿ ಗೋವಾದಲ್ಲಿ ಕೊಲೆಯಾಗಿದ್ದಾಳೆ. ಕೊಲೆ ಮಾಡಿದ ಆರೋಪಿ ಕೂಡ ಬೆಂಗಳೂರು ನಿವಾಸಿಯಾಗಿದ್ದಾನೆ. ಪ್ರೀತಿಸಿದ ಹುಡಗಿಯ ಕತ್ತು ಸೀಳಿ ಕೊಲೆ ಮಾಡಿದ ಪ್ರಿಯಕರ ಹುಬ್ಬಳ್ಳಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. 22 ವರ್ಷದ ರೋಶನಿ ಗೋವಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾಳೆ. ಗೋವಾದ ಅರಣ್ಯ ಪ್ರದೇಶದಲ್ಲಿ ಜೂನ್ 16 ರಂದು ರೋಶನಿ ಶವ ಸಿಕ್ಕಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಗೋವಾ ಪೊಲೀಸರು, ರೋಶನಿ ಹಿನ್ನೆಲೆ ಕಲೆಹಾಕಲು ಆರಂಭಿಸಿದರು.
ಕೆಲ ದಿನಗಳ ಹಿಂದಷ್ಟೇ ರೋಶನಿ ತಾನು ವಾಸವಾಗಿರುವ ಲಿಂಗರಾಜಪುರ ಬಡಾವಣೆಯ ನಿವಾಸಿಯಾಗಿದ್ದ ಸಂಜಯ್ ಕೇವಿನ್ ಎಂಬುವನ ಜೊತೆ ಗೋವಾಕ್ಕೆ ಬಂದಿರುವ ವಿಚಾರ ಗೊತ್ತಾಗಿದೆ. ರೋಶನಿ ಮತ್ತು ಸಂಜಯ್ ಕೇವಿನ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಇಬ್ಬರು ನಿರ್ಧರಿಸಿದ್ದು, ಗೋವಾದಲ್ಲಿಯೇ ಮದುವೆಯಾಗಲು ನಿರ್ಧರಿಸಿ ಇಬ್ಬರು ಕೆಲ ದಿನಗಳ ಹಿಂದೆ ಗೋವಾಕ್ಕೆ ಬಂದಿದ್ದರು. ಆದರೆ, ಗೋವಾದಲ್ಲಿ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪವಾಗಿದೆ. ಇದೇ ಕಾರಣದಿಂದ, ಪ್ರಿಯಕರ ಸಂಜಯ್ ಕೆವಿನ್ ಪ್ರೇಯಸಿ ರೋಶನಿಯನ್ನು ಕತ್ತು ಸೀಳಿ ಕೊಲೆ ಮಾಡಿ, ಗೋವಾ ಹೊರವಲಯದ ಅರಣ್ಯ ಪ್ರದೇಶದಲ್ಲಿ ಶವ ಬಿಸಾಡಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗೋವಾದ ಪೋಂಡಾ ಪೊಲೀಸರು, ತನಿಖೆ ಆರಂಭಿಸಿದರು. ಗೋವಾದಲ್ಲಿ ಕೊಲೆ ಮಾಡಿದ್ದ ಆರೋಪಿ, ಹುಬ್ಬಳ್ಳಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರೋಶನಿಯನ್ನು ಕೊಲೆ ಮಾಡಿರುವ ಆರೋಪ ಹೊತ್ತಿರುವ ಸಂಜಯ್ ಕೆವಿನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಗೋವಾ ಪೊಲೀಸರಿಗೆ ಆರೋಪಿಯನ್ನು ಹಸ್ತಾಂತರ ಮಾಡಿರುವುದರಿಂದ, ಅಲ್ಲಿನ ಪೊಲೀಸರು ಕೊಲೆ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದ್ದಾರಂತೆ. ತನಿಖೆ ಪೂರ್ಣಗೊಂಡ ಬಳಿಕ ರೋಶನಿ ಕೊಲೆಗೆ ಅಸಲಿ ಕಾರಣವೇನು ಎಂಬುವುದು ಗೊತ್ತಾಗಲಿದೆ.