ಚೆರ್ರಿಲರ್ನ್ ಮತ್ತು ಸಾಫ್ಟ್ವೇರ್ ಸಂಸ್ಥೆಯಾದ ಕೋಡ್ ಕ್ರಾಫ್ಟ್  ಟೆಕ್ನಾಲಜೀಸ್ ಸಹಯೋಗದೊಂದಿಗೆ : ದಕ್ಷಿಣ ಕನ್ನಡದ 1,000 ಕನ್ನಡ ಮಾಧ್ಯಮ ಸರ್ಕಾರಿ ಶಾಲಾ ಮಕ್ಕಳಿಗೆ ಡಿಜಿಟಲ್ ಶಿಕ್ಷಣದ ಉಚಿತ ಕೊಡುಗೆ.

0
53

ಮಂಗಳೂರು ಆಧಾರಿತ ಸಮಾಜಮುಖಿ ಎಜುಟೆಕ್ ಸ್ಟಾರ್ಟ್ಅಪ್ ಸಂಸ್ಥೆ ಚೆರ್ರಿಲರ್ನ್, ಹಾಗೂ ಮಂಗಳೂರಿನಲ್ಲಿ ಪ್ರಾರಂಭವಾಗಿ ಜಗತ್ತಿನ ನಾನಾ ಕಡೆಯಾದ ಕೆನೆಡಾ ಮತ್ತು ಅಮೆರಿಕದಲ್ಲೂ ಕಚೇರಿಗಳಿದ್ದು ಜಾಗತಿಕವಾಗಿ  ಕಾರ್ಯಾಚರಿಸುತ್ತಿರುವ ಪ್ರಸಿದ್ಧ ಸಾಫ್ಟ್ವೇರ್ ಸೇವಾ ಸಂಸ್ಥೆ  ಕೋಡ್ ಕ್ರಾಫ್ಟ್  ಟೆಕ್ನಾಲಜೀಸ್ ಜೊತೆ ಕೈಜೋಡಿಸಿದ್ದು, ಶೈಕ್ಷಣಿಕ ವರ್ಷ 2024–25  ಒಳಗಡೆ ದಕ್ಷಿಣ ಕನ್ನಡ ಜಿಲ್ಲೆಯ 1,000 ಸರ್ಕಾರಿ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಉಚಿತವಾಗಿ ಡಿಜಿಟಲ್ ಶಿಕ್ಷಣದ ವ್ಯವಸ್ಥೆಯನ್ನು ಕೊಡಲು ನಿರ್ಧರಿಸಿದೆ.

ಇದರ ಪ್ರಯುಕ್ತ, ಈ ಜೂನ್ ತಿಂಗಳ ಆರಂಭದಲ್ಲಿ ಬಂಟ್ವಾಳ ತಾಲ್ಲೂಕಿನ, ಉಳಿ ಗ್ರಾಮದ ಎರಡು ಸರ್ಕಾರಿ ಶಾಲೆಗಳಲ್ಲಿ ಚೆರ್ರಿಲರ್ನ್ ಆಪ್ ನ್ನು ಅಧಿಕೃತವಾಗಿ ಉದ್ಘಾಟಿಸಿ  ಜಾರಿಗೊಳಿಸಲಾಯಿತು. ಇದರ ಮೊದಲ ಹಂತದಲ್ಲಿ 300 ವಿದ್ಯಾರ್ಥಿಗಳನ್ನು ತಲುಪಿದ್ದು. ಈ ತಂತ್ರಜ್ಞಾನವು  ಕನ್ನಡ ಭಾಷೆಯಲ್ಲಿ ಆಟದಮಾದರಿಯ, ಸಂವಹನಾತ್ಮಕ, ಪಾಠ್ಯಕ್ರಮಕ್ಕೆ ಹೊಂದಿಕೆಯಾಗುವ ವಿಷಯವನ್ನು ಗ್ರಾಮೀಣ ಭಾಗದ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳಿಗೆ ಕಡಿಮೆ ಇಂಟರ್ನೆಟ್  ವೇಗವನ್ನು ಹೊಂದಿರುವ ಪ್ರದೇಶಗಳಲ್ಲಿ ಸಹ ಲಭ್ಯವಾಗುವಂತೆ ಮಾಡಲಾಗಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೋಡ್ ಕ್ರಾಫ್ಟ್  ಟೆಕ್ನಾಲಜೀಸ್ ಸಂಸ್ಥೆಯ ಆಪರೇಶನ್ ಲೀಡ್ ಜೋಬಿನ್ ಜೊಸೆಫ್ ಪಿ ಜೆ, ಚೆರ್ರಿಲರ್ನ್  ಸಂಸ್ಥೆಯ  ಸಿ ಇ ಒ ಶ್ರಿನಿಧಿ ಆರ್ ಎಸ್, ಚೆರ್ರಿಲರ್ನ್ಎ ಚ್ ಆರ್  ಟೀಮ್ ಲೀಡ್ ಸಜನಾ ಭಾಸ್ಕರ್ ಹಾಗೂ ಇತರ ತಂಡದ ಸದಸ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ಉಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ ಸಿ ಎಸ್ ಹಾಗೂ ಎಸ್ ಡಿ ಎಂ ಸಿ  ಅಧ್ಯಕ್ಷ ಪುರುಷೋತ್ತಮ, ಮತ್ತು ಉಳಿಬೈಲ್ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮಮತಾ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ರೋಹಿಣಾಥ ಗೌಡ ಉಪಸ್ಥಿತರಿದ್ದರು.

ಈ  ಡಿಜಿಟಲ್ ಶಿಕ್ಷಣದ ಜಾರಿಕರಣವನ್ನು ಸುಗಮಗೊಳಿಸಲು, ಚೆರ್ರಿಲರ್ನ್ ಸಂಸ್ಥೆ ದಕ್ಷಿಣ ಕನ್ನಡದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಜೊತೆ ಅಧಿಕೃತವಾಗಿ ಒಪ್ಪಂದ ಪತ್ರ (MoU) ಸಹಿ ಮಾಡಿದ್ದು, ಶಾಲಾ ಅಧಿಕಾರಿಗಳ ಸಹಯೋಗದೊಂದಿಗೆ ಜಾರಿಕರಣ ಮತ್ತು ಮೇಲ್ವಿಚಾರಣೆಗೆ ಸಹಕರಿಸುವ ರೂಪರೇಖೆಯನ್ನು ಸ್ಥಾಪಿಸಿದೆ.

“ಈ ಸಹಯೋಗವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣದತ್ತ ಪ್ರಮುಖ ಹೆಜ್ಜೆಯಾಗಿದೆ” ಎಂದು ಚೆರ್ರಿಲರ್ನ್ ಸಂಸ್ಥಾಪಕ ಶ್ರಿನಿಧಿ ಆರ್ ಎಸ್ ತಿಳಿಸಿದ್ದು, ಮತ್ತು  “ತಮ್ಮ ಯಶಸ್ಸಿಗೆ ಅಗತ್ಯವಿರುವ ತಂತ್ರಜ್ಞಾನವನ್ನು ಉಪಯೋಗಿಸಿ ಈ ಹಿನ್ನಲೆಯ ಮಕ್ಕಳಿಗೆ ಸಹಾಯ ಮಾಡುವುದೇ ನಮ್ಮ ಬದ್ಧತೆ.” ಎಂದು ಹೇಳಿದ್ದಾರೆ

ಈ ಸಂದರ್ಭದಲ್ಲಿ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್ ನ ಸ್ಥಾಪಕ ಮತ್ತು ಸಿಇಒ ದೀಕ್ಷಿತ್ ರೈ ಯವರು: ನಾವೀಗ ನಂಬುವುದು ‘ನಿಜವಾದ ಯಶಸ್ಸು ಎಂದರೆ ಕೇವಲ ನವೀನತೆಯಲ್ಲ—ಅದು ನಮ್ಮ ಸಮಾಜ ಮತ್ತು ನಮ್ಮ ಸಮುದಾಯದತ್ತ ಇರುವ ಜವಾಬ್ದಾರಿಯನ್ನೂ ಒಳಗೊಂಡಿರಬೇಕು’. 2011ರಿಂದಲೂ, ಬಹುಪುರಸ್ಕೃತ ಸೃಜನಾತ್ಮಕ ಎಂಜಿನಿಯರಿಂಗ್ ಕಂಪನಿಯಾದ ನಾವು ನಮ್ಮ ಪ್ರಯಾಣ ತಂತ್ರಜ್ಞಾನ ಶ್ರೇಷ್ಠತೆಯಿಂದ ಮಾತ್ರವಲ್ಲದೆ, ಸ್ಥಿರತೆ ಮತ್ತು ಸಾಮಾಜಿಕ ಪರಿಣಾಮದತ್ತ ನಮ್ಮ ಬದ್ಧತೆಯನ್ನು ಹೊಂದಿದ್ದೇವೆ. ಮತ್ತು ನಾವು ನಮ್ಮ CSR ಉಪಕ್ರಮಗಳ ಮೂಲಕ,  ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಸಮುದಾಯ ಅಭಿವೃದ್ಧಿಯಂತಹ ಹಿತಾಸಕ್ತಿಯ ವಿಷಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಇವುಗಳು ನಮ್ಮ ಮೌಲ್ಯಗಳಲ್ಲಿ ಆಳವಾಗಿ ನೆಲೆಯೂರಿದ್ದು, ಬಡವರೊಂದಿಗಿನ ಅನುಕಂಪ, ಮತ್ತು ಅವರ ಬೆಳವಣಿಗೆಯ ಸಂಸ್ಕೃತಿಯನ್ನು ರೂಪಿಸುತ್ತವೆ. ಪ್ರತಿಯೊಬ್ಬರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದು ಒಂದು ವಿಶೇಷ ಸೌಭಾಗ್ಯವಲ್ಲ, ಅದು ಪ್ರತಿಯೊಬ್ಬರ ಹಕ್ಕು. ಸಮಾನ ಶಿಕ್ಷಣವು ನ್ಯಾಯಸಮ್ಮತ ಹಾಗೂ ಸಬಲೀಕೃತ ಸಮಾಜದ ಭದ್ರ ಅಡಿಪಾಯವನ್ನು ಒದಗಿಸುತ್ತದೆ, ಇದರಿಂದ  ಪ್ರತಿಯೊಂದು ಮಗು ಬೆಳೆಯಲು ಸಾಧ್ಯವಾಗುತ್ತದೆ. ಚೆರ್ರಿಲರ್ನ್ ಸಂಸ್ಥೆಯ  ಜೊತೆಗೆ  ನಮ್ಮ ಸಹಭಾಗಿತ್ವವು ಗ್ರಾಮೀಣ ಮಕ್ಕಳಿಗೆ ಡಿಜಿಟಲ್  ಅಂತರವನ್ನು ಮೀರುವತ್ತದ ಒಂದು ಪ್ರಮುಖ ಹೆಜ್ಜೆಯಾಗಿದ್ದು,  ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಯುವ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಹೊಸದೊಂದು ಶಕೆಯ ಆರಂಭವಾಗಿದೆ. ಜಗತ್ತಿನಾದ್ಯಾಂತ ವ್ಯವಹಾರಗಳನ್ನು ಡಿಜಿಟಲ್ ರೀತಿಯಲ್ಲಿ ಪರಿವರ್ತಿಸಿಕೊಳ್ಳಲು ನಾವು ನೆರವಾಗುತ್ತಿರುವಾಗ, ಪ್ರಪಂಚವನ್ನು ಒಂದೊಂದೆ ಸಕಾರಾತ್ಮಕ ಹೆಜ್ಜೆಗಳ ಮೂಲಕ ಉತ್ತಮವಾಗಿಸಲು ಹೊಂದಿರುವ ನಮ್ಮ ಉತ್ಸಾಹವೂ ಅಷ್ಟೇ ಗಂಭೀರವಾಗಿದೆ ಎಂದು ತಮ್ಮ ಅನಿಸಿಗಳನ್ನು ಹಂಚಿಕೊಂಡರು. 

ಈ ಪ್ರೇರಣೆಯಿಂದಾಗಿ ಚೆರ್ರಿಲರ್ನ್ ಸಂಸ್ಥೆ, ಈ  ಶೈಕ್ಷಣಿಕ ವರ್ಷದ ಒಳಗಾಗಿ ಕರ್ನಾಟಕ ರಾಜ್ಯದಾದ್ಯಂತ  ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುವ 1 ಲಕ್ಷ ವಿದ್ಯಾರ್ಥಿಗಳನ್ನು ಇಂತಹದೇ  CSR-ಆಧಾರಿತ ಸಹಭಾಗಿತ್ವಗಳ ಮೂಲಕ ಈ ಯೋಜನೆನ್ನು ಮುಂದುವರಿಸುವ ಉದ್ದೇಶವನ್ನು ಹಮ್ಮಿಕೊಂಡಿದೆ.

ಈ ಗ್ರಾಮೀಣ ಶಿಕ್ಷಣಕ್ಕೆ ನವೀನ ದೃಷ್ಠಿಕೋನ ನೀಡಿದಕ್ಕಾಗಿ ಚೆರ್ರಿಲರ್ನ್ ಸಂಸ್ಥೆಯನ್ನು,  ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕೆರ್ ಪ್ರಶಸ್ತಿ 2023, ಕೇಂದ್ರ ಇಂಧನ ಸಚಿವರು ಕೊಡಮಾಡಿದ ದಿ ಹಿಂದೂ ಬಿಸಿನೆಸ್ ಲೈನ್  ಚೇಂಜ್ ಮೇಕರ್  ಪ್ರಶಸ್ತಿ 2023, ಮತ್ತು ರಾಜ್ಯದ ಐಟಿ & ಬಿಟಿ ಸಚಿವರಿಂದ ನೀಡಲಾದ ಎಲೆವೇಟ್ 2024 ಕರ್ನಾಟಕ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲ್ಪಟ್ಟಿದೆ.

ಈವರೆಗೆ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರಭಾವಿತಗೊಳಿಸಿರುವ ಈ ಚೆರ್ರಿಲರ್ನ್ ಆಪ್,  ಇವರಲ್ಲಿ  95% ಮಂದಿ ಮೊದಲ ಬಾರಿಗೆ ಎಜುಟೆಕ್  ಆಪ್  ಬಳಕೆದಾರರಾಗಿದ್ದಾರೆ. ಈ ಸಂಸ್ಥೆ ಮುಂದುವರಿದು, ಸ್ಥಳೀಯ ಭಾಷೆ, ಸಮಾನತೆ ಮತ್ತು ಕಡಿಮೆ ವೆಚ್ಚದಲ್ಲಿ ಲಭ್ಯವಿರುವ ಡಿಜಿಟಲ್ ಶಿಕ್ಷಣದ ಮುಖಾಂತರವಾಗಿ ಮುಂದಿನ ತಲೆಮಾರಿಗೆ ಶಿಕ್ಷಣದ ಹೊಸ ವ್ಯಾಖ್ಯಾನವನ್ನು ನೀಡುತ್ತಿದೆ.

LEAVE A REPLY

Please enter your comment!
Please enter your name here