ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಉಪ್ಪುಂದ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಹಾದು ಹೋಗುವ ಉಪ್ಪುಂದ ಗ್ರಾಮ ದೇವಳದ ಮುಖ ಮಂಟಪದಿಂದ ಮೊದಲ್ಗೊಂಡು ದೇವಿ ದುರ್ಗಾಪರಮೇಶ್ವರಿ ಸಾನಿಧ್ಯದಿಂದ ನೂರು ಅಡಿ ಅಂತರದಲ್ಲಿ ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಭದ್ರಕಾಳಿ ಮತ್ತು ಭೂತರಾಯ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವು ದಿನಾಂಕ: 14-05-2025 ರಿಂದ 16-05-2025 ಸಂಭ್ರಮದಲ್ಲಿ ನಡೆಯಿತು.
ಶೃಂಗೇರಿ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿ ಗಳವರ ಹಾಗೂ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ, ತಂತ್ರಿ ಶ್ರೀ ವೇದಮೂರ್ತಿ ನಟರಾಜ ಉಪಾಧ್ಯಾಯರು ಪೆರಂಪಳ್ಳಿ ಪ್ರಧಾನ ತಂತ್ರಿಗಳು ಹಾಗೂ ವೇದಮೂರ್ತಿ ಶ್ರೀ ರಾಮಚಂದ್ರ ಭಟ್ ವೆಂಕಟಾಪುರ ಶಿರಾಲಿ ಮತ್ತು ಅರ್ಚಕ ವೃಂದದವರು ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸಾನಿಧ್ಯದಲ್ಲಿ ಸಂಪನ್ನಗೊಂಡಿತು.
ದಿನಾಂಕ 14ರಂದು ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡಿತು. ದಿನಾಂಕ 15ರಂದು ಬೆಳಿಗ್ಗೆ 8-30ರಿಂದ ಗಣಯಾಗ, ಶ್ರೀ ನಾಗದೇವರಿಗೆ ನವಕುಂಭಾಭಿಷೇಕ, ಸರ್ಪ ಮೂಲ ಮಂತ್ರ ಹವನ, ಪ್ರಸನ್ನ ಪೂಜೆ , ಮಹಾಪೂಜೆ, “ಅನ್ನಸಂತರ್ಪಣೆ” ಸಾಯಂಕಾಲ ಗಂಟೆ 6-00ರಿಂದ :- ಶಕ್ತಿ ದಂಡಕ ಪೂಜೆ, ಕಲಾತತ್ವಯಾಗ, ಭದ್ರಕಾಳಿ ಕುರುದಿ ತರ್ಪಣ, ಭದ್ರಕಾಳಿ ಹವನ, ಭೂತರಾಯನಿಗೆ ಭೂತಮಾರಾಣ ಬಲಿ, “ಅನ್ನಸಂತರ್ಪಣೆ” ಸಾನಿಧ್ಯದಲ್ಲಿ ಸಂಪನ್ನಗೊಂಡಿತು.
ಇಂದು ಬೆಳಿಗ್ಗೆ 7-30ರಿಂದ ಗಣಯಾಗ, ಪ್ರತಿಷ್ಠಾಧಿವಾಸ-ಕಲಾತತ್ವಯಾಗ, ಮೂಲ ನಕ್ಷತ್ರ 9-20ರ ಮಿಥುನ ಲಗ್ನ ಸುಮುಹೂರ್ತದಲ್ಲಿ ದೇವರಿಗೆ ಜೀವ ಕುಂಭಾಭಿಷೇಕ, ನೇತ್ರ ವಿಲನ, 108 ಪ್ರತಿಷ್ಠಾ ಕಲಶಾಭಿಷೇಕ, ಪ್ರತಿಜ್ಞಾ ವಿಧಿ, ದೇವರ ದರ್ಶನ, ಪ್ರಸನ್ನ ಪೂಜೆ “ಮಹಾ ಅನ್ನಸಂತರ್ಪಣೆ” ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳು ಸಾನಿಧ್ಯದಲ್ಲಿ ಸಂಪನ್ನಗೊಂಡಿತು. ದೇವಸ್ಥಾನ ಸುತ್ತಲೂ ಹೂವಿನ ಅಲಂಕಾರ ದೀಪಾಲಂಕಾರ ಎಲ್ಲೆಂದರಲ್ಲಿ ಕಂಗೊಳಿಸುತ್ತಿತ್ತು
ಈ ಸಂದರ್ಭದಲ್ಲಿ
ಅಧ್ಯಕ್ಷರು / ಕಾರ್ಯದರ್ಶಿ / ಸರ್ವಸದಸ್ಯರು
ಅಷ್ಠಬಂಧ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಶ್ರೀ ಭದ್ರಕಾಳಿ ಹಾಗೂ ಭೂತರಾಯ ದೇವಸ್ಥಾನ
ಭಟ್ರಹಿತ್ತು ಉಪ್ಪುಂದ ಮತ್ತು ಅಧ್ಯಕ್ಷರು / ಕಾರ್ಯದರ್ಶಿ / ಸರ್ವಸದಸ್ಯರು ಭದ್ರಕಾಳಿ ಹಾಗೂ ಭೂತರಾಯ ದೇವಸ್ಥಾನ ಟ್ರಸ್ಟ್ (ರಿ.)
ಭಟ್ರಹಿತ್ತು ಉಪ್ಪುಂದ