ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಕರಾವಳಿ ಕೇಸರಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಬೆಳುವಾಯಿಯಲ್ಲಿ ನಡೆದ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನದಿಂದ ಸಂಗ್ರಹವಾಗಿ ಉಳಿಕೆಯಾದ ಮೊತ್ತವನ್ನು ಸಾಮಾಜಿಕ ಕಾರ್ಯಗಳಿಗೆ ನೀಡಿ ಮಾದರಿಯಾಗಿದ್ದಾರೆ.
ಕರಾವಳಿ ಕೇಸರಿಯ ಸ್ಥಾಪಕಾಧ್ಯಕ್ಷ ಸಮಿತ್‌ರಾಜ್ ದರೆಗುಡ್ಡೆಯವರ ನೇತೃತ್ವದಲ್ಲಿ ಮಂಗಳೂರಿನ ವಿಜಯಕುಮಾರ್ ಕೊಡಿಯಾಲ್‌ಬೈಲ್ ನೇತೃತ್ವದ ತಂಡ ಪ್ರದರ್ಶಿಸಿದ ಛತ್ರಪತಿ ಶಿವಾಜಿ ನಾಟಕದಿಂದ ಸಂಗ್ರಹಗೊಂಡ ಹೆಚ್ಚುವರಿ ಮೊತ್ತವನ್ನು ಹಿಂದು ಸುರಕ್ಷಾ, ಆರೋಗ್ಯ ಮತ್ತು ವಿದ್ಯಾನಿಧಿಯಾಗಿ ಒಟ್ಟು 4 ಲಕ್ಷ ರೂ.ಗಳನ್ನು ಹಸ್ತಾಂತರಿಸಲಾಯಿತು.
ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ವಿಹಿಂಪ ಪ್ರಮುಖರಾದ ಸುಚೇತನ್ ಜೈನ್, ಉದ್ಯಮಿಗಳಾದ ವಿಶ್ವನಾಥ ಕೋಟ್ಯಾನ್ ಹನ್ನೇರ್, ರತ್ನಾಕರ ಶೆಟ್ಟಿ ಖಂಡಿಗ, ಜಯಪ್ರಕಾಶ್, ಹೊಟೇಲ್ ಉದ್ಯಮಿ ಸುರೇಶ್ ಪೂಜಾರಿ, ಉದ್ಯಮಿ ಕಿರಣ್ ರೈ, ಹಿಂದು ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಸಂಯೋಜಕ ಹರೀಶ್ಚಂದ್ರ ಕೆ.ಸಿ.ಯವರ ಸಮ್ಮುಖದಲ್ಲಿ ನಿಧಿ ಹಸ್ತಾಂತರಿಸಲಾಯಿತು.
ಸಮಾರಂಭದಲ್ಲಿ ಸಮಾಜಮುಖಿ ಕಾರ್ಯಕರ್ತರಾದ ಶಿವ ಎಲ್. ಪೂಜಾರಿ ಡೆಂಜಾರ್, ವಸಂತ ಶಿರ್ತಾಡಿ, ನಾಟಕದ ಕರ್ತೃ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.