ಹುಬ್ಬಳ್ಳಿ ಶಹರದ ಸಮರಟಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೧೯ ನವೆಂಬರ್ ೨೦೨೫ರ ಬುಧವಾರ ದಂದು ನಡೆದ ಆನಂದ ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ೫ರಿಂದ ೭ ನೇ ತರಗತಿಯ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಜುನಾಥ ನಗರದ ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ಭಾರತಿ ದೇವರಮನಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಮೇಘಾ ಸುಣಗಾರ ಇಂಗ್ಲಿಷ್ ಕಂಠಪಾಠ ಪ್ರಥಮಸ್ಥಾನ, ಹಿಂದಿ ಕಂಠಪಾಠ ಅಜೀತ ಕರಿಗುಂಡಪ್ಪನವರ ಪ್ರಥಮ ಸ್ಥಾನ ಪಡೆದು ಪ್ರಶಂಸನಾ ಪತ್ರದೊಂದಿಗೆ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣ ಹೇಳಿದ್ದಾರೆ.ಸೋಮೇಶ ಕೆರಣ್ಣವರ ಭಕ್ತಿ ಮತ್ತು ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಕ್ರಮವಾಗಿ ದ್ವೀತಿಯ ಸ್ಥಾನ, ಸ್ನೇಹಾ ಕಿಳ್ಳಿಕ್ಯಾತರ ಕವನ ವಾಚನ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ, ಅನ್ನಪೂರ್ಣ ಕರಿಗುಂಡಪ್ಪನವರ ಆಶು ಭಾಷಣ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ, ಮಕ್ತುಮ ನಧಾಪ ಮಿಮಿಕ್ರಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಬಹುಮಾನಕ್ಕೆ ಭಾಜನರಾಗಿದ್ದಾರೆ. ಸನ್ನಿಧಿ ಶಿಪ್ರಿ, ಭೂಮಿಕಾ, ದಿವ್ಯಾ ಅರ್ಕಸಾಲಿ, ಸೃಷ್ಟಿ ಚವ್ಗಾಣ, ಸಮೃದ್ಧಿ ಚವ್ಹಾಣ ಸೆರಿದಂತೆ ೧೬ ಶಾಲೆಗಳ ನೂರಾರು ವಿದ್ಯಾರ್ಥಿಗಳ ವೈವಿಧ್ಯಮಯ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುದರುಸ್ಪರ್ಧಾ ನಿರ್ಣಾಕರಾದ ಮತ್ತೊರ್ವ ಶಿಕ್ಷಕಿ ಬಿ. ಜಿ. ಹಿರೇಮಠ, ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣ, ಹಿರಿಯ ಶಿಕ್ಷಕ ಮೋತಿಲಾಲ್ ರಾಠೋಡ, ಸಿಆರ್ಪಿಗಳಾದ ರವಿ ಬಂಗೇಣ್ಣವರ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಮತ್ತಿತರ ಶಿಕ್ಷಕರು ವೇದಿಕೆಯಲ್ಲಿ ಇದ್ದರು. ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್. ಎಮ್. ಫಡ್ನೇಶಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಅನಸೂಯಾ ವಾಯ್. ಯಕ್ಕುಂಡಿ, ಶಿಕ್ಷಣ ಸಂಯೋಜಕರಾದ ವನಿತಾ ಆರ್, ಪ್ರವೀಣ ಹಾಗೂ ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಭೀಮಪ್ಪ ಸುಣಗಾರ, ಪ್ರಗು ಹೆಚ್. ಬಿ. ಕೊರವರ ಶಾಲಾ ಗುರುಮಾತೆಯರು, ವ್ಯವಸ್ಥಾಪಕ ಶಿಕ್ಷಕರಾದ ಶಿವಶಿಂಪಿ, ಶಿಲವಂತರ, ಪ್ರಕಾಶ, ರೂಪ, ಗೀತಾ, ಪುಷ್ಪ ಹಲವಾರು ಗಣ್ಯಮಾನ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಸುಹೇಚ ಪರಮವಾಡಿ

