ಶಿವತಿಕೆರೆ, ಶ್ರೀ ಉಮಾಮಹೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವ ಸಂಪನ್ನ

0
48

ಶಿವತಿಕೆರೆ, ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಂಪ್ರತಿ ನಡೆಯುವ ಲಕ್ಷ ದೀಪೋತ್ಸವ ದಿನಾಂಕ 20 -11 -2025 ನೇ ಗುರುವಾರ ಎಡಪದವು ಶ್ರೀ ಮುರಳೀಧರ ತಂತ್ರಿ ಗಳ ನೇತೃತ್ವದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ,ಗಣಯಗ, ನವಕ ಪ್ರಧಾನ ಕಲಶ ಪರಿವಾರ ದೈವಗಳಿಗೆ ಪರ್ವ ಸೇವೆ, ಶ್ರೀ ನವಗ್ರಹ ದೇವರಿಗೆ ಪೂಜೆ, ಶ್ರೀ ನಾಗ ದೇವರಿಗೆ ತನು ತಂಬಿಲ ಸೇವೆ, ನಂತರ ಬಲಮುರಿ ಶ್ರೀ ಸಿದ್ದಿ ವಿನಾಯಕ ದೇವರಿಗೆ ಜಗನ್ಮಾತೆ ಶ್ರೀ ದುರ್ಗಾದೇವಿ ಗೆ ಮತ್ತು ಶ್ರೀ ಉಮಾಮಹೇಶ್ವರ ದೇವರಿಗೆ ಮಹಾಪೂಜೆ , ಬಲಿ ಉತ್ಸವ,ಪಲ್ಲ ಪೂಜೆ, ಮಹಾಪೂಜೆ, ಅನ್ನ ಸಂತರ್ಪಣೆ, ಮಧ್ಯಾಹ್ನ ಅನ್ನ ಸಂತರ್ಪಣೆ ಸೇವಾ ದಾರರು ಶ್ರೀಮತಿ ಗಿರಿಜಾ ಮತ್ತು ಶ್ರೀ ವಾಸು ಬಿ. ಶೆಟ್ಟಿ ಹಾಗೂ ಮಕ್ಕಳು ದೂಪದಬಾಕ್ಯಾರು , ಕುಂಟಲ್ಪಾಡಿ ,ಹಾಗೂ ದಿ! ಕಮಲ ದೇವಾಡಿಗ ಮತ್ತು ದಿ| ತಮ್ಮಯ ದೇವಾಡಿಗ ಇವರ ಸ್ಮರಣಾರ್ಥವಾಗಿ ಮಕ್ಕಳ ಸೇವೆ,” ತಾಯಿಕೃಪಾ , ಹಿರಿಯಂಗಡಿ ಕಾರ್ಕಳ,ನಂತರ ಸಾಯಂಕಾಲ ಶ್ರೀ ಉಮಾಮಹೇಶ್ವರ ದೇವರಿಗೆ ರಂಗ ಪೂಜೆ , ಬಲಿ,ಉತ್ಸವ, ಪಲ್ಲಕ್ಕಿ ಉತ್ಸವ ಕೆರೆ ದೀಪೋತ್ಸವ ಪ್ರಸಾದ ವಿತರಣೆ ವಿಜೃಂಭಣೆಯಿಂದ ನಡೆಯಿತು, ಶ್ರೀ ಮುರಳೀಧರ ತಂತ್ರಿ ಎಡಪದವು ಕ್ಷೇತ್ರದ ತಂತ್ರಿಗಳು, ಶ್ರೀ ರಾಜೇಂದ್ರ ಭಟ್ ಅರ್ಚಕರು, ಆಡಳಿತ ಮೊಕ್ತೇಸರ ಚಂದ್ರಶೇಖರ್ ವಿ. ಶೆಟ್ಟಿ, ಸುಂದರ ದೇವಾಡಿಗ ಗೌರವ ಅಧ್ಯಕ್ಷರು, ಮೊಕ್ತೇಸರ ರು, ಸುರೇಂದ್ರ ಶೆಟ್ಟಿ, ಸಂಜೀವ ದೇವಾಡಿಗ, ಸುದರ್ಶನ್ ಭಂಡಾರಿ,ಕೆ. ಬಿ. ಗುರುಪ್ರಸಾದ್ ರಾವ್, ಬಾಲಕೃಷ್ಣ ದೇವಾಡಿಗ, ಶ್ರೀಮತಿ ಜಯಂತಿ ಎನ್. ದೇವಾಡಿಗ, ಹಾಗೂ ನಾಗೇಶ್ ದೇವಾಡಿಗ ಅಧ್ಯಕ್ಷರು, ಶ್ರೀಮತಿ ಅರುಣಾ ದಿನೇಶ್ ಕಾರ್ಯದರ್ಶಿ, ಮತ್ತು ಸೇವಾ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಗ್ರಾಮಸ್ಥರು ಊರ ಪರ ಊರ ಭಕ್ತಾದಿಗಳು ಶ್ರೀ ಉಮಾಮಹೇಶ್ವರ ದೇವರ ಲಕ್ಷ ದೀಪೋತ್ಸವ ಸಂಭ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here