ಬಿಜೂರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ “* ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ , ಸಮೃದ್ಧ ಬೈಂದೂರು ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು, ಲಯನ್ಸ್ ಕ್ಲಬ್ ಉಪ್ಪುಂದ , ಜೋಗಿ ಮನೆ ಟ್ರಸ್ಟ್ ಹಳೆಗೇರಿ , ಸರ್ಕಾರಿ ಪ್ರೌಢಶಾಲೆ ಬಿಜೂರು ಇವರುಗಳ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ ” ಪ್ರೇರಣಾ 2025″ ಕಾರ್ಯಕ್ರಮ ಸರ್ಕಾರಿ ಪ್ರೌಢ ಶಾಲೆ ಬಿಜುರಿನಲ್ಲಿ ಇತ್ತೀಚಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣಮೂರ್ತಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ , ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ರಾಜ್ಯ ನಿರ್ದೇಶಕ್ ಅಬ್ದುಲ್ ಸಲಾಮ್ ಚಿತ್ತೂರು, ಎಂ.ಜೋಗಿ ಮನೆ ಟ್ರಸ್ಟ್ ನ ವಸಂತ ಜೋಗಿ, ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕಿನ ಮೊಹಮ್ಮದ್ ಇಲ್ಯಾಸ್ , ಉಪಸ್ಥಿರಿದ್ದರು.
ಸಂಪನ್ಮೂಲ ವ್ಯಕ್ತಿ ಆಗಿ ಸರೋಜಾ ವಲಯ ತರಬೇತುದಾರರು ,ಹಾಗೂ ಜೆಸಿ ವಲಯ ತರಬೇತುದಾರ ಮನೋಜ್ ಕಡಬ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವ ಹಿಸಿದರು . ಸರ್ಕಾರಿ ಪ್ರವಾಸ ಶಾಲೆ ಮುಖ್ಯ ಶಿಕ್ಷಕಿ ಯಶೋಧ ಸ್ವಾಗತಿಸಿ ವಂದಿಸಿದರು.ಕಾರ್ಯಕ್ರಮದ ನಿರ್ದೇಶಕರು ಸುಮಾ ಆಚಾರ್ ಪ್ರಾಸವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

