
ಬ್ರಹ್ಮಾವರ : ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಇದೀಗ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಿನಾಂಕ 12 ಮತ್ತು 13 ರಂದು ಮಂಡ್ಯದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಶಾಲೆಯನ್ನು ಪ್ರತಿನಿಧಿಸಲಿದ್ದಾರೆ.
ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು:
* 17 ರ ವಯೋಮಾನದ ಬಾಲಕಿಯರ ವಿಭಾಗ: ಹರ್ಷಿತಾ, ಮಾನ್ಯ
* 17 ರ ವಯೋಮಾನದ ಬಾಲಕರ ವಿಭಾಗ: ಗೌತಮ್ ಆಚಾರ್ಯ
* 14 ರ ವಯೋಮಾನದ ಬಾಲಕಿಯರ ವಿಭಾಗ: ದಕ್ಷಾ, ಸಾನ್ವಿ ಪಿ. ಪೂಜಾರಿ, ಮಾನ್ವಿ, ಪೂಜಿತಾ, ಪತ್ರಿಕಾ, ರಶ್ಮಿ, ಸಾನ್ವಿ ಎಸ್. ಮೊಗವೀರ.
