ಕಣಿಯೂರು ಗ್ರಾಮ ಪಂಚಾಯತ್ ಮುಂದೆ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

0
23

ಕಣಿಯೂರು ಭಾರತೀಯ ಜನತಾ ಪಾರ್ಟಿ ಕಣಿಯೂರು ಮತ್ತು ಉರುವಾಲು ಶಕ್ತಿ ಕೇಂದ್ರ ದ ವತಿಯಿಂದ ಕರ್ನಾಟಕ ದ ಕಾಂಗ್ರೇಸ್ ಸರಕಾರದ ಜನವಿರೋಧಿ ನೀತಿ ಮತ್ತು ಎಲ್ಲಾ ರೀತಿಯ ಬೆಲೆ ಏರಿಕೆ ವಿರೋಧಿಸಿ ಕಣಿಯೂರು ಗ್ರಾಮ ಪಂಚಾಯತ್ ಮುಂಭಾಗ ದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು..

ಪ್ರತಿಭಟನೆ ಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಶಾರದಾ ಆರ್ ರೈ, ವಿಜಯ ಕುಮಾರ್ ಕಳ್ಳಲಿಕೆ, ಬಿಜೆಪಿ ಕಣಿಯೂರು ಮಹಾಶಕ್ತಿ ಕೇಂದ್ರ ದ ಕಾರ್ಯದರ್ಶಿ ಮಹೇಶ್ ಜೇಂಖ್ಯಾರು, ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳರವರು ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆ ಬಳಿಕ ಪಿ ಡಿ ಒ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ಯಲ್ಲಿ ಬಿಜೆಪಿ ಕಣಿಯೂರು ಶಕ್ತಿ ಕೇಂದ್ರ ಪ್ರಮುಖ್ ಯತೀಶ್ ಶೆಟ್ಟಿ ಪನೆಕ್ಕರ, ಉರುವಾಲು ಶಕ್ತಿ ಕೇಂದ್ರ ಪ್ರಮುಖ್ ಕೃಷ್ಣ ಪ್ರಸಾದ್, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಮಿತಾ ಕುಶಾಲಪ್ಪ ಗೌಡ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪನೆಕ್ಕರ, ತಣ್ಣೀರುಪOತ ಸಿ ಎ ಬ್ಯಾಂಕ್ ಉಪಾಧ್ಯಕ್ಷ ಸುನಿಲ್ ಅನಾವು, ಕಣಿಯೋರು ಗ್ರಾಮ ಪಂಚಾಯ್ತ್ ಉಪಾಧ್ಯಕ್ಷೆ ಜಾನಕಿ ಪಿಂಡಿವನ, ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ ಗೌಡ, ಪದ್ಮುಂಜ ಮಿಲ್ಕ್ ಸೊಸೈಟಿ ಅಧ್ಯಕ್ಷ ಪುರುಷೋತ್ತಮ್ ಗೌಡ ಸೇರಿದಂತೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ, ಕಾರ್ಯದರ್ಶಿ, ಪಂಚಾಯತ್ ಸದಸ್ಯರು ಸಹಕಾರಿ ಸಂಘ ಗಳ ನಿರ್ದೇಶಕರು ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here