ಹುಬ್ಬಳ್ಳಿ : ಭಿಕ್ಷುಕ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಹುಬ್ಬಳ್ಳಿ ನಗರದ ದಿಡ್ಡಿ ಓಣಿಯಲ್ಲಿ ನಡೆದಿದೆ.
ಬಿಹಾರ ಮೂಲದ ವಿಶೇಷ ಚೇತನ ವ್ಯಕ್ತಿ ಮಿತಿಲೇಶ್ ಕುಮಾರ್ ಎಂಬಾತನನ್ನು ಆತನ ಸ್ನೇಹಿತ ರಾಜೇಶ್ ಕುಮಾರ್ ಅಲಿಯಾಸ್ ನಸೀರ್ ಖಾನ್ ಹತ್ಯೆ ಮಾಡಿದ್ದಾನೆ. ಭಾನುವಾರ ರಾಜೇಶ್ ಕುಮಾರ್ ಮದ್ಯದ ಅಮಲಿನಲ್ಲಿ ಮಿತಿಲೇಶ್ ಕುಮಾರ್ ಜತೆ ತಂಟೆ ತೆಗೆದು ಹೊಡೆದಾಡಿಕೊಂಡಿದ್ದಾರೆ.
ಬಳಿಕ ಜಗಳ ವಿಕೋಪಕ್ಕೆ ತಿರುಗಿ ರಾಜೇಶ್ ಮಿತಿಲೇಶನಿಗೆ ಮೈಕ್ ಸೆಟ್ ನಿಂದ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಿತಿಲೇಶನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾನಿಸಲು ಯತ್ನಿಸಿದರೂ ಮಾರ್ಗಮಧ್ಯದಲ್ಲಿ ಆತ ಅಸುನೀಗಿದ್ಯಾನ ಎಂದು ವರದಿಯಾಗಿದೆ.
ಕೊಲೆ ಪ್ರಕರಣದ ಕುರಿತು ಪೊಲೀಸ್ ಆಯುಕ್ತರು ಹೇಳಿದ್ದೇನು?
ಭಿಕ್ಷುಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲಿಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದು, ನಿನ್ನ ರಾ.ತ್ರಿ ಹಳೆ ಹುಬ್ಬಳ್ಳಿಯ ದಿಡ್ನಿ ಓಣಿಯಲ್ಲಿ ಕೊಲೆ ನಡೆದಿದೆ. ಇಬ್ಬರು ಭಿಕ್ಷಕರು ಹೊಡೆದಾಡಿಕೊಂಡಿದ್ದಾರೆ. ಮೈಕ್ ಸ್ಟ್ಯಾಂಡ್ ನಿಂದ ಹೊಡೆದ ಪರಿಣಾಮ ರಕ್ತಸ್ರಾವ ಆಗಿದೆ. ಕೂಡಲೇ ಕಿಮ್ಸ್ ಆಸ್ಪತ್ರೆಗೆ ಕರೆತರುವಷ್ಯರಲ್ಲಿ ಸಾವನ್ನಪ್ಪಿದ್ದಾರೆ
ಇಬ್ಬರು ವ್ಯಕ್ತಿಗಳು ಭಿಕ್ಷೆ ಬೇಡಿಕೊಂಡಿದ್ದರು. ಮೃತ ಪೋಲಿಯೋದಿಂದ ಕಾಲು ಕಳೆದುಕೊಂಡಿದ್ದ.
ಆರೋಪಿ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ. ದಿನ್ನಿ ಓಣಿಯಲ್ಲಿ ಪರಿಚಯಸ್ಕರು ಕುಟುಂಬಸ್ಮರ ಜೊತೆ ವಾಸವಾಗಿದ್ದು, ಹಬ್ಬದ ಹಿನ್ನೆಲೆ ಉಳಿದವರು ಮನೆಯಲ್ಲಿ ಇರಲಿಲ್ಲ. ಮದ್ಯದ ಅಮಲಿನಲ್ಲಿ ಇಬ್ಬರೂ ಹೊಡೆದಾಡಿಕೊಂಡಿದ್ದು, ಬಳಿಕ ವಿಕೋಪಕ್ಕೆ ತಿರುಗಿ ಕೊಲೆ ನಡೆದಿದೆ. ಮೃತ ವ್ಯಕ್ತಿ ನಿಖಿಲೇಶ ಕುಮಾರ ಬಿಹಾರ ಮೂಲದವನು. ಆರೋಪಿ ನಸೀರ್ ಅಲಿಯಾಸ್ ರಾಜೇಶ್ ಹರಿಯಾಣದವನು. ಭಿಕ್ಷೆ ಬೇಡುತ್ತ ಬೇರೆ ಬೇರೆ ಕಡೆ ಅಲೆದಾಡುತ್ತಿದ್ದರು. ಕಳೆದ ಮೂರನಾಲ್ಕು ತಿಂಗಳಿಂದ ಹುಬ್ಬಳ್ಳಿಯಲ್ಲೊ ಇದ್ದರು ಅನ್ನೋ ಮಾಹಿತಿ ಇದೆ ಎಂದು ಹೇಳಿದ್ದಾರೆ.