“ಓಂಕಾರ ಕುಣಿತ ಭಜನಾ ಮಂಡಳಿ” ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ

0
7

ಮಾಂಟ್ರಾಡಿ : ಯುವ ಬಿರುವೆರ್ (ರಿ) ಮಾಂಟ್ರಾಡಿ ಹಾಗೂ ಮಹಿಳಾ ಘಟಕ ಮಾಂಟ್ರಾಡಿ ಇದರ ನೇತೃತ್ವದಲ್ಲಿ ಉದ್ಘಾಟನೆಗೊಂಡ “ಓಂಕಾರ ಕುಣಿತ ಭಜನಾ ಮಂಡಳಿ ಮಾಂಟ್ರಾಡಿ” ತಂಡದ ವತಿಯಿಂದ ಭಜನಾ ತಂಡದ ಮಕ್ಕಳಿಗೆ ಚತುರ್ಥ ವರ್ಷದ ಪುಸ್ತಕ ವಿತರಣೆ ಸಮಾರಂಭವು ಮೇ 24, 2026ರಂದು ಪೆಂಚಾರು ಶಾಲಾ ವಠಾರದಲ್ಲಿ ನೆರವೇರಿತು.

ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಸದಸ್ಯರು, ಪದಾಧಿಕಾರಿಗಳು, ಗ್ರಾಮಸ್ಥರು, ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ಪುಸ್ತಕದ ಪ್ರತಿಯೊಂದು ಪುಟವೂ ಹೊಸ ಜಗತ್ತಿನ ಬಾಗಿಲು. ಪುಸ್ತಕ ಹೇಳುತ್ತದೆ ನನ್ನನ್ನು ತಲೆ ತಗ್ಗಿಸಿ ಓದು, ನಿನ್ನನ್ನು ತಲೆಯೆತ್ತಿ ನಿಲ್ಲುವಂತೆ ಮಾಡುತ್ತೇನೆ. ಮಕ್ಕಳ ಭವಿಷ್ಯದ ದಾರಿ ಪುಸ್ತಕಗಳೊಳಗೆ ಅಡಗಿದೆ. ಅದನ್ನು ಹೊರತೆಗೆದು ಬೆಳಗಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ” ಎಂದು ಹೇಳಿದರು.

ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿವರ್ಷವೂ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಸಭೆಯಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಲಾಯಿತು.

ಈ ಸಮಾಜಮುಖಿ ಕಾರ್ಯಕ್ರಮವನ್ನು ಯುವ ಬಿರುವೆರ್ (ರಿ) ಮಾಂಟ್ರಾಡಿ, ಮಹಿಳಾ ಘಟಕ ಮಾಂಟ್ರಾಡಿ ಹಾಗೂ ಓಂಕಾರ ಕುಣಿತ ಭಜನಾ ಮಂಡಳಿ ಮಾಂಟ್ರಾಡಿ ಸಂಯುಕ್ತವಾಗಿ ಆಯೋಜಿಸಿತ್ತು.

LEAVE A REPLY

Please enter your comment!
Please enter your name here