ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜು ನಾಟೇಕಲ್, ಮಂಗಳೂರು ಸ್ನಾತಕೋತ್ತರ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ, 100% ಫಲಿತಾಂಶ, 100% ರ‍್ಯಾಂಕ್

0
5

ಮಂಗಳೂರು : ಬೆಂಗಳೂರು ನಗರ ಮೂಲದ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು 2026ನೇ ಸಾಲಿನಲ್ಲಿ ಆಯೋಜಿಸಿದ ಅಂತಿಮ ಸ್ನಾತಕೋತ್ತರ ಎಂ.ಡಿ. (ಜನರಲ್ ಮೆಡಿಸಿನ್) ಪದವಿ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು, ನಗರದ ನಾಟೇಕಲ್ ಪ್ರದೇಶದಲ್ಲಿ ಕಾರ್ಯಾಚರಿಸುವ ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜಿನ 5 ವಿದ್ಯಾರ್ಥಿಗಳು ಉತ್ತೀರ್ಣರಾದುದಲ್ಲದೆ 100% ಫಲಿತಾಂಶ ದಾಖಲಿಸಿ ಹಾಗೂ ಎಲ್ಲಾ 5 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದು 100% ರ‍್ಯಾಂಕ್ ವಿಜೇತರಾಗಿದ್ದಾರೆ.ಈ ಸಾಧನೆ ಕಾಲೇಜಿನ ಶೈಕ್ಷಣಿಕ ಇತಿಹಾಸದಲ್ಲಿ ಪ್ರಥಮ ಬಾರಿಗೆ ದಾಖಲಾಗಿದೆ.

ಡಾ. ಪಾರ್ಥಸಾರಥಿ ಸಮಾಲ್ ರ‍್ಯಾಂಕ್ 5), ಡಾ. ಅರ್ಫಾಝ್ ಮೊಹಮ್ಮದ್ ರ‍್ಯಾಂಕ್ 1), ಡಾ.ರುದ್ರೇಶ್ ಗೌಡ ರ‍್ಯಾಂಕ್ 9), ಡಾ. ಹೇಮಂತ್‌ಕುಮಾರ್ ರ‍್ಯಾಂಕ್ 5), ಡಾ. ಅಬ್ಬಾಸ್ ಆಲಿ ಅಬ್ದುಲ್‌ಮಜೀದ್ ಖಾಜಿ ರ‍್ಯಾಂಕ್ 8) ವಿದ್ಯಾರ್ಥಿಗಳು ತಮ್ಮ ಅಪೂರ್ವ ಶೈಕ್ಷಣಿಕ ಸಾಧನೆಗೆ ತಮ್ಮ ಕಾಲೇಜಿನ ಪ್ರಾಂಶುಪಾಲ, ಪ್ರಾಧ್ಯಾಪಕ ವರ್ಗ, ಹಾಗೂ ವಿಭಾಗೀಯ ಮುಖ್ಯಸ್ಥರಾದ ಪ್ರೊ. ಡಾ. ದೇವದಾಸ ರೈಯವರ ಪ್ರೋತ್ಸಾಹ, ಮಾರ್ಗದರ್ಶನ, ತರಬೇತಿ ಹಾಗೂ ಶ್ರೇಷ್ಠ ಮಟ್ಟದ ಉಪನ್ಯಾಸ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಣಚೂರು ವೈದ್ಯಕೀಯ ಶಿಕ್ಷಣ ಕಾಲೇಜಿನ ಆಡಳಿತ ಮಂಡಳಿ ವರ್ಗದವರು ವಿದ್ಯಾರ್ಥಿಗಳ ಅಮೋಘ ಶೈಕ್ಷಣಿಕ ಸಾಧನೆಯನ್ನು ಅಭಿನಂದಿಸಿದ್ದಾರೆ.

ವರದಿ : ಎಂ.ವಿ. ಮಲ್ಯ

LEAVE A REPLY

Please enter your comment!
Please enter your name here