
ಮನೆ ಎಂಬುದು ಪ್ರತಿಯೊಬ್ಬರ ಕನಸು. ಮನೆ ನಿರ್ಮಿಸಬೇಕೆಂಬ ಮಹಾದಾಸೆಯನ್ನು ಹೊಂದಿ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಅಬ್ಬನಡ್ಕ ಬಳಿಯ ಆರ್ಥಿಕ ಸಂಕಷ್ಟದಲ್ಲಿರುವ ಕೊರಗ ಸಮುದಾಯದ ಯಮುನಾ ಮತ್ತು ವಸಂತ ಕೊರಗ ದಂಪತಿಗಳಿಗೆ ನೂತನ ಮನೆಯಲ್ಲಿ ನಿರ್ಮಿಸಿ ಕೊಡುವ ಕಾರ್ಯಕ್ಕೆ ಮುಂದಾಗಿದೆ.
ಈ ಬಡ ಕುಟುಂಬ ಈಗಾಗಲೇ ಸರಕಾರದಿಂದ ದೊರೆಯುವ ಅನುದಾನವನ್ನು ಪಡೆದು ಒಂದು ಹಂತದ ಮನೆಯ ನಿರ್ಮಾಣದ ಕೆಲಸ ಪ್ರಾರಂಭಿಸಿದರು ಈಗಿನ ಪ್ರತಿಯೊಂದು ಮನೆ ನಿರ್ಮಾಣದ ಸಾಮಾಗ್ರಿಗಳ ದುಬಾರಿ ಬೆಲೆ ಏರುತ್ತಿರುವುದರಿಂದ ಮನೆಯ ಪೂರ್ತಿ ಕೆಲಸವನ್ನು ಸರಕಾರದ ಅನುದಾನ ಬಳಸಿ ಪೂರ್ಣಗೊಳಿಸಲು ಅಸಾಧ್ಯವಾಗಿ ಈ ಬಡ ಕುಟುಂಬಕ್ಕೆ ಅಸಹಾಯಕ ಸ್ಥಿತಿಯನ್ನು ಎದುರಿಸುವಂತಾಗಿದೆ ಕೂಲಿ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿರುವ ಇಬ್ಬರು ದಂಪತಿಗಳಿಗೆ ಆರ್ಥಿಕ ಸಂಕಷ್ಟದಿಂದ ಅರ್ಧಕ್ಕೆ ನಿಂತ ಮನೆ ನಿರ್ಮಾಣದ ಕೆಲಸ ಪೂರ್ಣಗೊಳಿಸಲು ಬಡ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬವೊಂದರ ಮನೆ ನಿರ್ಮಿಸುವ ಕನಸಿಗೆ ನೆರವಾಗುವ ಉದ್ದೇಶದಿಂದ ಸಮಾಜಮುಖಿ ಈ ಹೃದಯವಂತ ಕಾರ್ಯಕ್ಕೆ ರಾಜ್ಯ ಪ್ರಶಸ್ತಿ ವಿಜೇತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಸ್ಥೆಯ “ಅಬ್ಬನಡ್ಕ ಸೇವಾ ಟ್ರಸ್ಟ್”ನ ನೇತೃತ್ವದಲ್ಲಿ ಮಹಾಸೇವಾ ಯೋಜನೆಗೆ ಮುಂದಾಗಿದೆ.
ಈಗಾಗಲೇ ಸರಕಾರದಿಂದ ದೊರೆತ ಅನುದಾನವನ್ನು ಬಳಸಿ ಪಂಚಾಂಗ, ಗೋಡೆ, ಒಳಗಿನ ಗೋಡೆಯ ಗಾರೆ ಕೆಲಸ, ಮೇಲ್ಚಾವಣಿಯ ಕೆಲಸ ಪೂರ್ಣಗೊಂಡಿದ್ದು.
ಮನೆ ನಿರ್ಮಾಣದ ಬಾಕಿ ಇರುವ ಕೆಲಸಗಳು
ಹೊರಗಿನ ಗೋಡೆಯ ಗಾರೆ ಕೆಲಸ, ಜಗಲಿ ನಿರ್ಮಾಣ, ಅಡುಗೆ ಓಲೆ ನಿರ್ಮಾಣಕ್ಕೆ ಸಿಮೆಂಟ್, ಹೊಯ್ಗೆ, ಮೇಸ್ತ್ರಿ ಹಾಗೂ ಹೆಲ್ಪರ್ ಕೆಲಸದವರ ಸಂಬಳ, ವಿದ್ಯುತ್ ವ್ಯವಸ್ಥೆಗೆ ಎಲೆಕ್ಟ್ರಿಕಲ್ ಸಾಮಾಗ್ರಿಗಳು ಹಾಗೂ ಎಲೆಕ್ಟ್ರಿಷಿಯನ್ ಕೆಲಸದವರ ಸಂಬಳ, 6 ಕಿಟಕಿ ಬಾಗಿಲು, 3 ಮರದ ಬಾಗಿಲು, 1 ಮರದ ದಾರಂದ, ಪೈಂಟಿಂಗ್ ಕೆಲಸಕ್ಕೆ ಪೈಂಟ್ ಹಾಗೂ ಪೈಂಟರ್ ಕೆಲಸದವರ ಸಂಬಳ ಸೇರಿ ಬಡ ಕುಟುಂಬದ ನೆಮ್ಮದಿಯ ವಾಸಕ್ಕೊಂದು ಮನೆ ನಿರ್ಮಿಸಿಕೊಡುವ ಸಂಕಲ್ಪ ಈ ಮಹತ್ವಾಕಾಂಕ್ಷಿ ಯೋಜನೆಯ ಮೂಲಕ ಮನೆಯ ಸಂಪೂರ್ಣ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಇನ್ನು ರೂಪಾಯಿ 3,00,000/- ಮೊತ್ತದ ಅಗತ್ಯವಿದೆ.

ಸಂಕಷ್ಟದಲ್ಲಿರುವವರಿಗೆ ನಮ್ಮ ಕೈಲಾದಷ್ಟು ನೆರವು ನೀಡುವುದು ನಮ್ಮ ಸಾಮಾಜಿಕ ಜವಾಬ್ದಾರಿ. ಪ್ರತಿಯೊಬ್ಬರಿಗೂ ಸುರಕ್ಷಿತ ಹಾಗೂ ಸ್ವಂತ ಸೂರು ದೊರೆಯಬೇಕು ಎಂಬ ಆಶಯದಿಂದ ನಿಮ್ಮಿಂದಾದ ಸಹಕಾರವನ್ನು ನೀಡಿ ಮಾನವೀಯತೆಯ ದೃಷ್ಟಿಯಿಂದ ಈ ಬಡ ಕುಟುಂಬಕ್ಕೆ ಆಸರೆಯಾಗೋಣ.
ಆರ್ಥಿಕ ಸಂಕಷ್ಟದಿಂದ ಅರ್ಧಕ್ಕೆ ನಿಂತ ನೂತನ ಮನೆ ನಿರ್ಮಾಣದ ಕೆಲಸ ಪೂರ್ಣಗೊಳಿಸುವ ಮಹಾಸೇವಾ ಯೋಜನೆಗೆ ಮಾನವೀಯ ನೆಲೆಯಲ್ಲಿ ಕೈಗೊಂಡ ಈ ಯೋಜನೆಗೆ ದಾನಿಗಳ ಸಹಕಾರ ನೀಡಿ ನಮ್ಮ ಜೊತೆ ಕೈಜೋಡಿಸಿ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷ ಸುರೇಶ್ ಅಬ್ಬನಡ್ಕ, ಸಂಚಾಲಕರಾದ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಇನ್ನ ಪ್ರೇಮ್ ಕುಲಾಲ್ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9902171267
9611043664
9686093099
ಮನೆ ನಿರ್ಮಾಣಕ್ಕೆ ಸಹಕರಿಸುವ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ನಿಮ್ಮ ದೇಣಿಗೆ ಮೊತ್ತವನ್ನು ಕಳುಹಿಸಬಹುದು.
