ಜರ್ನಿ ಥೇಟರ್ ಗ್ರೂಪ್ (ರಿ.), ಮಂಗಳೂರು ವತಿಯಿಂದ 2026 ರ ಜುಲೈ 25 ರಂದು ಶಕ್ತಿನಗರದ ಶಕ್ತಿ ಪಿಯು ಕಾಲೇಜಿನಲ್ಲಿ ಕ್ಯಾಂಪಸ್ ಥಿಯೇಟರ್ ಒಂದು ದಿನದ ರಂಗ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಾಗಾರದಲ್ಲಿ ಸುಮಾರು 40 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಾಗಾರವನ್ನು ವಿದ್ದು ಉಚ್ಚಿಲ್,ಸುಧೀಶ್ ಕೂಡ್ಲು, ಮೇಘನಾ ಕುಂದಾಪುರ ಮತ್ತು ಚಿನ್ಮಯಿ ಭಟ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ತಂಡದ ಸದಸ್ಯರಾದ ರಾಹುಲ್ ಕುಡುಪು, ಶ್ರೀಶ , ಶಮಿತಾ, ಶರಣ್ಯ , ಗೌತಮ್, ತೃಪ್ತಿ, ನಂದಕಿಶೋರ್, ಶ್ರಾವಿಕ್, ರೋಹನ್ ಉಚ್ಚಿಲ್ , ಸುನಿಲ್ ರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಾಗಾರದಲ್ಲಿ ಮನಸ್ಸು, ದೇಹ, ಲಯ ಹಾಗೂ ಚಲನೆ ಆಧಾರಿತ ಚಟುವಟಿಕೆಗಳನ್ನು ನಡೆಸಲಾಯಿತು. ಸುಮಾರು 40 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕೊನೆಗೆ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜರ್ನಿಯ ರೋಹನ್ ಉಚ್ಚಿಲ್, ಸುನಿಲ್ ಪಲ್ಲಮಜಲು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಶೆಟ್ಟಿ, ಉಪನ್ಯಾಸಕರಾದ ಅಕ್ಷತಾ, ಮೆಲಿಸಾ ಲೂವಿಸ್ ಮತ್ತು ನವೀನ್ ಹೆಗಡೆ ಉಪಸ್ಥಿತರಿದ್ದರು.

