ಜವನೆರ್ ಬೆದ್ರ ಫೌಂಡೇಶನ್ (ರಿ.) 110ನೇ ವರ್ಷದ ಬೆದ್ರ ಕೃಷ್ಣೋತ್ಸವ -2026

0
8

ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ (ರಿ.) ವತಿಯಿಂದ ಬೆದ್ರದ ಕೃಷ್ಣೋತ್ಸವ -2026 ನಡೆಯಲಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸಾಂಸ್ಕೃತಿಕ ಮತ್ತು ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಆಗಸ್ಟ್ 23, 2026 (ಭಾನುವಾರ) ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಚಿತ್ರಕಲಾ ಸ್ಪರ್ಧೆ, ಅಖಿಲ ರಸಪ್ರಶ್ನೆ, ಭಕ್ತಿಗೀತೆ ಗಾಯನ, ಭಗವದ್ಗೀತೆ ಪಠಣ, ಅಷ್ಟಮಿದ ಗೊಬ್ಬು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಸೆಪ್ಟೆಂಬರ್ 5, 2026ರಂದು ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

ಚಿತ್ರಕಲಾ ಸ್ಪರ್ಧೆ

ಬೆಳಿಗ್ಗೆ 8.30 ರಿಂದ 10.00 ಗಂಟೆಯವರೆಗೆ ನಡೆಯುವ ಚಿತ್ರಕಲಾ ಸ್ಪರ್ಧೆಯಲ್ಲಿ ಮೂರು ವಿಭಾಗಗಳಿರಲಿವೆ.

  • 1 ರಿಂದ 3ನೇ ತರಗತಿ: ಶ್ರೀ ಕೃಷ್ಣನ ಪ್ರಿಯ ವಸ್ತುಗಳು (ಕೊಳಲು, ಮಡಿಕೆ, ನವಿಲುಗರಿ, ಹಸು-ಕರು)
  • 4 ರಿಂದ 7ನೇ ತರಗತಿ: ಗೋಪಾಲ ಕೃಷ್ಣ
  • 8 ರಿಂದ 10ನೇ ತರಗತಿ: ನನ್ನ ಕಲ್ಪನೆಯಲ್ಲಿ ಶ್ರೀ ಕೃಷ್ಣ

ಅಖಿಲ ರಸಪ್ರಶ್ನೆ ಸ್ಪರ್ಧೆ

ಬೆಳಿಗ್ಗೆ 10.15 ರಿಂದ 10.45 ಗಂಟೆಯವರೆಗೆ ನಡೆಯುವ ರಸಪ್ರಶ್ನೆಯ ವಿಷಯ ರಾಮಾಯಣ ಮತ್ತು ಮಹಾಭಾರತವಾಗಿದ್ದು, 4 ರಿಂದ 7ನೇ ಹಾಗೂ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶವಿದೆ.

ಭಕ್ತಿಗೀತೆ ಗಾಯನ

5 ರಿಂದ 7ನೇ ತರಗತಿ, 8 ರಿಂದ 10ನೇ ತರಗತಿ ಹಾಗೂ ಕಾಲೇಜು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗೆ 2+1 ನಿಮಿಷ ಸಮಯ ನೀಡಲಾಗಿದ್ದು, ಹಿನ್ನೆಲೆ ಸಂಗೀತಕ್ಕೆ ಅವಕಾಶವಿಲ್ಲ. ಶ್ರುತಿ ಬಾಕ್ಸ್ ಬಳಸಬಹುದು.

ಭಗವದ್ಗೀತೆ ಪಠಣ

1 ರಿಂದ 5ನೇ ಹಾಗೂ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 2ನೇ ಅಧ್ಯಾಯ (ಸಾಂಖ್ಯ ಯೋಗ) ಆಧಾರಿತ ಪಠಣ ಸ್ಪರ್ಧೆ ನಡೆಯಲಿದೆ. ಪ್ರತಿ ಸ್ಪರ್ಧಿಗೆ 3+1 ನಿಮಿಷ ಸಮಯ ನೀಡಲಾಗುತ್ತದೆ.

ಅಷ್ಟಮಿದ ಗೊಬ್ಬು

1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ದೇವಸ್ಥಾನದ ವಠಾರದಲ್ಲಿ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿದೆ.

‘ಮುದ್ದು ಕೃಷ್ಣ’ ವಿಡಿಯೋ ಸ್ಪರ್ಧೆ

1 ರಿಂದ 2 ವರ್ಷ, 2 ರಿಂದ 5 ವರ್ಷ (Landscape Video ಮಾತ್ರ) ಹಾಗೂ 5 ರಿಂದ 8 ವರ್ಷ ವಯೋಮಿತಿಯ ಮಕ್ಕಳಿಗಾಗಿ ವಿಡಿಯೋ ಸ್ಪರ್ಧೆ ಆಯೋಜಿಸಲಾಗಿದೆ. ವಿಡಿಯೋ ಒಂದು ನಿಮಿಷ ಮೀರಬಾರದು. ಜನನ ಪ್ರಮಾಣಪತ್ರ ಕಡ್ಡಾಯವಾಗಿದ್ದು, 86606 37663 ಸಂಖ್ಯೆಗೆ ವಿಡಿಯೋವನ್ನು ಕಳುಹಿಸಬೇಕು. ಸ್ಪರ್ಧೆಯು ಆಗಸ್ಟ್ 1ರಿಂದ 31ರವರೆಗೆ ನಡೆಯಲಿದ್ದು, ಸೆಪ್ಟೆಂಬರ್ 3ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.

ಸ್ಪರ್ಧೆಗಳ ವಿಜೇತರಿಗೆ ಸೆಪ್ಟೆಂಬರ್ 5, 2026ರಂದು ಮೂಡುಬಿದಿರೆಯ ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿಯ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ಪ್ರದಾನ ಮಾಡಲಾಗುತ್ತದೆ.

ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜವನೆರ್ ಬೆದ್ರ ಫೌಂಡೇಶನ್ (ರಿ.) ಹಾಗೂ ಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ (ಮಹಿಳಾ ಘಟಕ) ಮನವಿ ಮಾಡಿವೆ.