ಶತಾಯುಷಿ, ನಿವೃತ್ತ ತಹಶೀಲ್ದಾರ್ ಬಿ.ಎಸ್. ಕುಲಾಲ್ ನಿಧನ

0
25

ಶತಾಯುಷಿ, ಹಿರಿಯ ಚೇತನ, ನಿವೃತ್ತ ತಹಶೀಲ್ದಾರ್ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಬಿ.ಎಸ್. ಕುಲಾಲ್ ನಿಧಾನರಾಗಿದ್ದಾರೆ.

ಶತಮಾನದ ಸುದೀರ್ಘ ಪಯಣದಲ್ಲಿ ಸಮಾಜಕ್ಕೆ ಇವರು ನೀಡಿದ ಕೊಡುಗೆ ಅಪಾರ. ತಮ್ಮ ಕೊನೆಯುಸಿರಿನವರೆಗೂ ಸಹಕಾರ ಕ್ಷೇತ್ರ ಮತ್ತು ಕುಂಬಾರ ಸಮುದಾಯದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಾರ್ಗದರ್ಶಿ ಬೆಳಕೊಂದು ನಂದಿಹೋಗಿದೆ. ಅವರ ಸರಳತೆ, ಅನುಭವದ ನುಡಿಗಳು ಹಾಗೂ ಸಮಾಜಮುಖಿ ಕಳಕಳಿ ಎಂದಿಗೂ ಅಮರ.

ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಭಗವಂತನು ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಹಾರೈಸಲಾಗಿದೆ.