ಚಿಕಿತ್ಸೆಗಾಗಿ ನೆರವಿನ ಹಸ್ತ ಚಾಚಿದ ಕರುನಾಡು ಚಾರಿಟೇಬಲ್ ಟ್ರಸ್ಟ್

0
28

ಬೆಳ್ತಂಗಡಿ : ಕರುನಾಡು ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ ವತಿಯಿಂದ 2026ರ ಆಗಸ್ಟ್ ತಿಂಗಳ 15ನೇ ಮಾಸಿಕ ಸೇವಾ ಯೋಜನೆಯಡಿ ₹10,000 ಧನ ಸಹಾಯವನ್ನು ಅನಾರೋಗ್ಯದಿಂದ ಬಳಲುತ್ತಿರುವ ಯಶೋಧ ಅವರಿಗೆ ಹಸ್ತಾಂತರಿಸಲಾಯಿತು.

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕರ್ಣಾಲ್ ನಿವಾಸಿ ಯಶೋಧ ಅವರು ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮುಂದಿನ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಮಾಸಿಕ ಸೇವಾ ಯೋಜನೆಯಡಿ ಈ ಧನ ಸಹಾಯವನ್ನು ನೀಡಲಾಯಿತು.

ಆಗಸ್ಟ್ 30, 2026ರಂದು ‘ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ’ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ₹10,000 ಸೇವಾ ಮೊತ್ತವನ್ನು ಯಶೋಧ ಅವರ ಚಿಕಿತ್ಸಾ ನೆರವಿಗಾಗಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕರುನಾಡು ಚಾರಿಟೇಬಲ್ ಟ್ರಸ್ಟ್‌ನ ಎಲ್ಲಾ ಸೇವಾ ಮಾಣಿಕ್ಯರು ಉಪಸ್ಥಿತರಿದ್ದು, ಸೇವಾ ಕಾರ್ಯಕ್ಕೆ ಬೆಂಬಲ ನೀಡಿದರು.

ಅನಾರೋಗ್ಯದಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಮಾನವೀಯ ಸೇವೆಯ ಸಂದೇಶವನ್ನು ಸಾರುತ್ತಿರುವ ಟ್ರಸ್ಟ್‌ನ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸೇವಾ ಯೋಜನೆಯ ಯಶಸ್ಸಿಗೆ ಸಹಕಾರ ನೀಡಿದ ಎಲ್ಲರಿಗೂ ಟ್ರಸ್ಟ್ ಆಡಳಿತ ವಿಭಾಗದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.