ಚಿಕ್ಕಮಗಳೂರು : ಮದುವೆಗೆ ಮುನ್ನ ಮಗುವಿಗೆ ಜನ್ಮ ನೀಡಿದ ಯುವತಿ – ನವಜಾತ ಶಿಶು ಹತ್ಯೆ ಶಂಕೆ

0
181

ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದ ಯುವತಿ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಕತ್ತು ನವಜಾತ ಶಿಶು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದು, ಆಕೆಗೆ ಹೆರಿಗೆಯಾಗಿದೆ.ತಂದೆ, ತಾಯಿ, ಅಜ್ಜಿ ಮತ್ತು ಮೂವರು ಮಹಿಳೆಯರ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡ ಯುವತಿಗೆ ಗಂಡು ಮಗು ಜನಿಸಿದ ಬಳಿಕ ತಂದೆ, ತಾಯಿ ಹಾಗೂ ಅಜ್ಜಿ ಮಗುವನ್ನು ಕೊಂದು ಹೊರವಲಯದ ತಿಪ್ಪೆಯಲ್ಲಿ ಗುಂಡಿ ತೆಗೆದು ಹೂತುಹಾಕಿದ್ದಾರೆ. 15 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಕ್ಕದ ಮನೆಯ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಲಕ್ಕವಳ್ಳಿ ಠಾಣೆ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here