ಮಕ್ಕಳು ಬಹುಮಾನಕ್ಕೆ ಸೀಮಿತಿವಾಗದೇ ಶಿಕ್ಷಣದ ಕಡೆಗೆ ಗುರಿ ಇರಬೇಕು-ಸಾಲಿಗ್ರಾಮ ಗಣೇಶ್ ಶೆಣೈ

0
53

ದಾವಣಗೆರೆ : ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅವರ ಜೀವನದ ಒಂದು ತಿರುವು ವಿದ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಗೆ ತಂದೆ-ತಾಯಿಗಳಿಗೆ ಉತ್ತಮ ಫಲಿತಾಂಶದೊAದಿಗೆ ಮಕ್ಕಳ ಜೀವನದ ಭವ್ಯ ದಿವ್ಯ ಭವಿಷ್ಯ ಆಗುತ್ತದೆ. ಚಿತ್ರ ಬರೆಯುವ ಉಚಿತ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಕ್ಕೆ ಸೀಮಿತವಾಗದೇ ಶಿಕ್ಷಣದ ಕಡೆಗೆ ಗುರಿ ಇರಬೇಕಾಗಿದೆ ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.

ದಾವಣಗೆರೆಯ ಕೆ.ಟಿ.ಜೆ. ನಗರ ಶ್ರೀ ಗಜಾನನ ಯುವಕ ಸಂಘ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 49ನೇ ವರ್ಷದ ಶ್ರೀ ಗಣೇಶ ಮಹೋತ್ಸವ ಪ್ರಯುಕ್ತ ದಾವಣಗೆರೆಯ ಕೆ.ಟಿ.ಜೆ. ನಗರದ 2ನೇ ತಿರುವು, ಶಿವಪ್ಪಯ್ಯ ವೃತ್ತದ ಹತ್ತಿರವಿರುವ ಶ್ರೀ ಮಹಾಗಣಪತಿ, ಶ್ರೀ ಶನೈಶ್ಚರ, ಶ್ರೀ ದುರ್ಗಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚಿಗೆ ಶ್ರೀ ಗಣೇಶನ ಚಿತ್ರ ಬರೆಯುವ ಉಚಿತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಭಿನಂದನಾ ಪತ್ರ, ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ ನೀಡಿದ ಈ ವೇದಿಕೆಯಲ್ಲಿ ಶೆಣೈಯವರು ಮಾತನಾಡಿದರು.

ಕಳೆದ 4 ದಶಕಗಳಿಂದ ವಾಣಿಜ್ಯ ನಗರಿಯನ್ನು ಕಠಿಣ ಪರಿಶ್ರಮದಿಂದ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ನಗರಿಯಾಗಿ ಬದಲಾಯಿಸಿದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಶ್ರೀ ಗಜಾನನ ಯುವಕ ಸಂಘದಿಂದ ಗೌರವಿಸಲಾಯಿತು.

ವೇದಿಕೆಯಲ್ಲಿ ಶ್ರೀ ಗಜಾನನ ಯುವಕ ಸಂಘದ ಅಧ್ಯಕ್ಷರಾದ ವಿರೂಪಾಕ್ಷಪ್ಪ, ಪುರೋಹಿತರಾದ ರಮೇಶ್‌ಭಟ್, ಯುವಕ ಸಂಘದ ಪದಾಧಿಕಾರಿಗಳ, ಉಚಿತ ಚಿತ್ರ ಕಲೆಯ ತೀರ್ಪುಗಾರರು, ಕಲಾವಿದರಾದ ಚಂದ್ರಶೇಖರ ಎಸ್.ಸಂಗಾ, ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಮುಂತಾದವರು ಉಪಸ್ಥಿತರಿದ್ದರು.