ಮಕ್ಕಳ ಸಂಭ್ರಮದ ಹಪ್ಪಳ ತಯಾರಿಕಾ ಶಿಬಿರ

0
49


ಬಂಟ್ವಾಳ : ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಮಕ್ಕಳ ಸಂಭ್ರಮದ ಹಪ್ಪಳ ತಯಾರಿಕಾ ಶಿಬಿರ ಜರಗಿತು.

ಶಾಲಾ ಹಿರಿಯ ವಿದ್ಯಾರ್ಥಿ ಜಯರಾಮ್ ನಾವಡರವರ ನೇತೃತ್ವದಲ್ಲಿ ದೂರದ ಪುತ್ತೂರಿನಿಂದ ಹಲಸಿನಕಾಯಿ ತಂದು ಶಾಲೆಯಲ್ಲಿ ಮಕ್ಕಳಿಗೆ ಹಪ್ಪಳ ಮಾಡುವ ರೀತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ಮಕ್ಕಳ ಜೊತೆ ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿಗಳು,ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಜೊತೆ ಸೇರಿಕೊಂಡರು.


ಹಿಂದಿನ ಕಾಲದ ಅನೇಕ ವಿದ್ಯೆಗಳು ಮರೆತು ಹೋಗುವ ಸಂದರ್ಭದಲ್ಲಿ ಅಂತಹ ವಿದ್ಯೆಗಳನ್ನು ನೆನಪಿಸುವ ಉದ್ದೇಶಕ್ಕೋಸ್ಕರ ಹಪ್ಪಳ ತಯಾರಿಕ ಶಿಬಿರವನ್ನು ಹಮ್ಮಿಕೊಂಡಿದ್ದೇವೆ, ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ತೀರ ಬಡತನದ ಮಧ್ಯೆಯು ಮಳೆಗಾಲದ ಆಹಾರಕ್ಕೋಸ್ಕರ ಯಾವ ರೀತಿ ಆಹಾರ ಪದಾರ್ಥಗಳನ್ನು ಮಾಡಿ ಶೇಖರಣೆ ಮಾಡುತ್ತಿದ್ದರು ಎಂದು ಈಗಿನ ಮಕ್ಕಳಿಗೆ ತಿಳಿಪಡಿಸುವ ಉದ್ದೇಶದಿಂದ ಈ ಹಪ್ಪಳ ತಯಾರಿಕ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ಕಾರ್ಯಕ್ರಮದ ರೂವಾರಿ ಶಾಲಾ ಹಿರಿಯ ವಿದ್ಯಾರ್ಥಿ ಜಯರಾಮ ನಾವಡ ತಿಳಿಸಿದರು.

LEAVE A REPLY

Please enter your comment!
Please enter your name here