Thursday, April 24, 2025
Homeಕುಂದಾಪುರಜೆ.ಸಿ.ಐ ಕುಂದಾಪುರ ಇವರಿಂದ ಬೊಳ್ಕಟ್ಟೆಯಲ್ಲಿ ಸಾವ೯ಜನಿಕ ಬಸ್ ನಿಲ್ದಾಣ‌ ನಿಮಾ೯ಣ

ಜೆ.ಸಿ.ಐ ಕುಂದಾಪುರ ಇವರಿಂದ ಬೊಳ್ಕಟ್ಟೆಯಲ್ಲಿ ಸಾವ೯ಜನಿಕ ಬಸ್ ನಿಲ್ದಾಣ‌ ನಿಮಾ೯ಣ

ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳ್ಕಟ್ಟೆ ಪರಿಸರದಲ್ಲಿ ಸಮಸ್ತ ಗ್ರಾಮಸ್ಥರ ಉಪಯೋಗಕ್ಕಾಗಿ ಜೆ.ಸಿ.ಐ ಕುಂದಾಪುರ ಹಾಗೂ ಬೋಳ್ಕಟ್ಟೆ ಪ್ರೇಂಡ್ಸ್ ಸಹಕಾರದಲ್ಲಿ ಬೋಳ್ಕಟ್ಟೆಯಲ್ಲಿ ಸಾವ೯ಜನಿಕ‌ ಬಸ್ ನಿಲ್ದಾಣ ನಿಮಾ೯ಣಗೊಳಿಸಲಾಯಿತು.

ಕಾಯ೯ಕ್ರಮದ ಉದ್ಘಾಟನೆಯನ್ನು ಜೆ.ಸಿ.ಐ ಭಾರತ ಜೆ.ಎಫ್.ಆರ್.ಜಿ ಸೂಯ೯ನಾರಾಯಣ ವಮ೯ ಇವರು ಹಾಗೂ ಗುಲ್ವಾಡಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾಗಿರುವ ಚಂದ್ರ ಪೂಜಾರಿ ಜೊತೆಯಾಗಿ ಉದ್ಘಾಟಿಸಿದರು.

ಕಾಯ೯ಕ್ರಮದಲ್ಲಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯವರು ವನಿತಾ ಶೆಟ್ಟಿ ,ಜೆ.ಸಿ.ಐ ಅಭಿಲಾಷ್ ಬಿ.ಎ,ವಲಯಾಧ್ಯಕ್ಷರು ವಲಯ 15,ಸುಮಾ ಆಚಾಯ೯,ಅಶ್ವಿನಿ ಐತಾಳ್,ಪ್ರಶಾಂತ್ ಆಚಾಯ೯,ಜೇ.ಸಿ.ಐ ಕುಂದಾಪುರ ಅಧ್ಯಕ್ಷರು ಸುಬ್ರಹ್ಮಣ್ಯ ಆಚಾಯ೯ ಗುಲ್ವಾಡಿ ,ಗ್ರಾಮ ಪಂಚಾಯತ್ ಸದಸ್ಯರು,ಬೋಳ್ಕಟ್ಟೆ ಪ್ರೆಂಡ್ಸ್ ಗ್ರಾಮಸ್ಥರು, ಜೆ.ಸಿ.ಐ. ಪೂವಾ೯ಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular