ಮಂಗಳೂರು: ಮಂಗಳೂರು ಐಟಿ ಡೀಲರ್ಸ್ ಅಸೋಸಿಯೇಷನ್ ವತಿಯಿಂದ ಪಡುವ ಮೈದಾನದಲ್ಲಿ 7ನೇ ಆವೃತ್ತಿಯ MITDA ಪ್ರೀಮಿಯರ್ ಲೀಗ್–2026 ಕ್ರಿಕೆಟ್ ಟೂರ್ನಿ ಅತ್ಯಂತ ವೈಭವಯುತವಾಗಿ ಹಾಗೂ ಶಿಸ್ತಿನಿಂದ ನೆರವೇರಿತು.

ಐಟಿ ಡೀಲರ್ಸ್ ಹಾಗೂ ಅವರ ಸಿಬ್ಬಂದಿಯಿಂದ ಕೂಡಿದ ಒಟ್ಟು 8 ತಂಡಗಳು ಈ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆದವು. ಲೀಗ್ ಹಂತದಿಂದಲೇ ತೀವ್ರ ಸ್ಪರ್ಧೆ ಕಂಡುಬಂದಿತು.
ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಮಂಗಳೂರು (RCM) ಮತ್ತು ಬ್ಯಾರಾಕುಡಾ ಬ್ರೀಜರ್ಸ್ ತಂಡ ಮುಖಾಮುಖಿಯಾಗಿದ್ದವು.
ರೋಚಕವಾಗಿ ನಡೆದ ಈ ಪಂದ್ಯದಲ್ಲಿ ಡಿಸ್ಟ್ರಿಬ್ಯೂಟರ್ ಉದ್ಯೋಗಿಗಳಿಂದ ರೂಪುಗೊಂಡ ರಾಯಲ್ ಚಾಲೆಂಜರ್ಸ್ ಮಂಗಳೂರು ತಂಡವು ಉತ್ತಮ ಪ್ರದರ್ಶನ ನೀಡಿ ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿತು.ಟೂರ್ನಿಯ ಅತ್ಯುತ್ತಮ ಆಟಗಾರ (ಮ್ಯಾನ್ ಆಫ್ ದ ಸೀರೀಸ್) ಪ್ರಶಸ್ತಿಯನ್ನು ಆರ್‌ಪಿ ಟೆಕ್ ಮಂಗಳೂರು ತಂಡದ ಚೇತನ್ ಅವರು ಪಡೆದರು. ಟೂರ್ನಿಯ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಆರ್‌ಪಿ ಟೆಕ್ ಮಂಗಳೂರು ತಂಡದ ಆನಂದ್ ಕುಮಾರ್ ಪಡೆದುಕೊಂಡರು.

