ಕರಾವಳಿ ಕರ್ನಾಟಕದಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಸಿದ್ಧಪಡಿಸಲಾದ ಕೇಕ್, ನ್ಯೂರಿ, ಕುಕ್ಕೀಸ್, ಕಿಡಿಯೋ, ಅಕ್ಕಿಲಡ್ಡು, ಖಾದ್ಯ ತಿಂಡಿ-ತಿನಿಸುಗಳ ಜೊತೆ ಕ್ರಿಸ್ ಮಸ್ ಟೋಪಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಿ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಲಾಯಿತು.
ಈ ಸಂಧರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ನಾಡಿನ ಎಲ್ಲಾ ಜನತೆಗೆ ಕ್ರಿಸ್ ಮಸ್ ಹಬ್ಬವು ಶಾಂತಿ -ಸೌಹಾರ್ಧತೆಯಿಂದ ಮೂಡಿ ಬರಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಶ್ರೀ ವಿಜಯ ಬೈಕಂಪಾಡಿ, ಕ್ರೈಸ್ತ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಶ್ರೀ ಎಸ್ ಚಿನ್ನಪ್ಪ ಮತ್ತು ಶ್ರೀ ಸಿರಿಲ್ ಡಿ ಸೋಜಾ ರವರು ಉಪಸ್ಥಿತರಿದ್ದರು .

