ಉಡುಪಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಾದ್ಯಂತ ಧಾರ್ಮಿಕ ಕ್ಷೇತ್ರಗಳು ಹಾಗೂ ದೇವಸ್ಥಾನಗಳಲ್ಲಿ ಸಮಾಜಮುಖಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಸ್ಥಳೀಯ ಊರಿನವರು ಸದಸ್ಯರು ಸೇರಿ ಯೋಜನೆಯ ಕಾರ್ಯಕರ್ತರು ದುರ್ಗಾಪರಮೇಶ್ವರಿ ದೇವಸ್ಥಾನದ ಒಳಾಂಗಣ ಹಾಗೂ ಹೊರಂಗಣವನ್ನು ಸ್ವಚತೆ ಮಾಡಿದರು ಪವಿತ್ರ ದೇವಾಲಯದ ಆವರಣದಲ್ಲಿರುವ ಕಸ ಕಡ್ಡಿಗಳನ್ನು ಹಾಗೂ ಗಿಡಗಂಟಿಗಳ ತೆರವು ಮಾಡಿ ದೇವಸ್ಥಾನ ಸುತ್ತ ಮುತ್ತ ಬೆಳೆದಿದ್ದ ಅನಗತ್ಯ ಗಿಡಗಳನ್ನು ಮತ್ತು ಕಳೆಗಳನ್ನು ತೆಗೆದು ದೇವಾಲಯ ಅಂಗಳ ಶುದ್ಧ ಮಾಡಿ ಭಕ್ತರಿಗೆ ಅನುಕೂಲವಾಗುವಂತೆ ಉತ್ತಮ ವಾತಾವರಣ ನಿರ್ಮಿಸಲಾಯಿತು.

ಈ ಸ್ವಚ್ಛತಾ ಕಾರ್ಯಕ್ರಮ ನೋಡಿ ಊರಿನ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಅವರು ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಒಕ್ಕೂಟದ ಅಧ್ಯಕ್ಷರಾದ ವಿಜಯೇಂದ್ರ ನಾಯ್ಕ್ ನೂತನ ಒಕ್ಕೂಟದ ಅಧ್ಯಕ್ಷರಾದ ಪರಮೇಶ್ವರ ಆಚಾರ್ಯ, ಒಕ್ಕೂಟದ ಪದಾಧಿಕಾರಿಗಳು,ರಮಣಿ m,ಸುಧಾಕರ್, ಮುದ್ದುನಾಯ್ಕ್ ಸಂತೋಷ ಹಾಗೂ ದೇವಸ್ಥಾನ ಕಮಿಟಿಯವರು,ಸುಧಾಕರ ತಿಂಗಳಾಯ, ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ರಾಮು ಸಂಘದ ಸದಸ್ಯರು ಸ್ಥಳೀಯ ಸೇವಾ ಪ್ರತಿನಿಧಿ ಸುಧಾಕರ ನಾಯ್ಕ್ ಭಾಗವಹಿಸಿದ್ದರು.

