ಬಾಲ್ತಿಲ ಒಕ್ಕೂಟ ಹಾಗೂ ಶೌರ್ಯ ವಿಪತ್ತು ನಿರ್ವಹಣ ಘಟಕ ಕಲ್ಲಡ್ಕ ಆಶ್ರಯದಲ್ಲಿ ಸ್ವಚ್ಛತಾ ಶ್ರಮದಾನ

0
9

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಸ್ವಸಹಾಯ ಸಂಘಗಳ ಬಾಲ್ತಿಲ ಒಕ್ಕೂಟ ಹಾಗೂ ಶೌರ್ಯ ವಿಪತ್ತು ನಿರ್ವಹಣ ಘಟಕ ಕಲ್ಲಡ್ಕ ಆಶ್ರಯದಲ್ಲಿ ಸ್ವಚ್ಛತಾ ಶ್ರಮದಾನ ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಸ್ವಸಹಾಯ ಸಂಘಗಳ ಬಾಲ್ತಿಲ ಒಕ್ಕೂಟ ಹಾಗೂ ಶೌರ್ಯ ವಿಪತ್ತು ನಿರ್ವಹಣ ಘಟಕ ಕಲ್ಲಡ್ಕ ಆಶ್ರಯದಲ್ಲಿ ಸ್ವತಂತ್ರೋತ್ಸವದ ನಿಮಿತ್ತ ಸ್ವಚ್ಛತಾ ಕಾರ್ಯಕ್ರಮ ಸರಕಾರಿ ಶಾಲೆ ಕುಧ್ರೆಬೆಟ್ಟು ಇಲ್ಲಿ ಸ್ವಚ್ಛತೆಯನ್ನು ಮಾಡುವುದರ ಮೂಲಕ ಶ್ರಮದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕಲ್ಲಡ್ಕ ವಲಯ ಮೇಲ್ವಿಚಾರಕರಾದ ಸುಖರಾಜ್, ಶಾಲಾ ಮುಖ್ಯ ಶಿಕ್ಷಕಿ ದೇವಿಕ , ಒಕ್ಕೂಟ ಅದ್ಯೆಕ್ಷೆ ಉಮಾವತಿ ಪೂರ್ಲಿಪಡಿ, ಸೇವಾ ಪ್ರತಿನಿಧಿಗಳಾದ ವಿದ್ಯಾ, ಕಲ್ಲಡ್ಕ ವಲಯ ನಿಯೋಜಿತ ಅಧ್ಯಕ್ಷ ಚಿದಾನಂದ ಸುವರ್ಣ ಪಟ್ಟೆಕೋಡಿ,,ಒಕ್ಕೂಟದ ನಿಯೋಜಿತ ಅಧ್ಯಕ್ಷರಾದ ಮಾಧವ ಸಾಲಿಯಾನ್, ನಿಯೋಜಿತ ಕಾರ್ಯದರ್ಶಿ ರಮೇಶ್ ಕುಧ್ರೆ ಬೆಟ್ಟು, ಶಾಲಾ ಶಿಕ್ಷಕಿಯರಾದ ಸುಮಿತ್ರ, ಅಮಿತಾ ವಿಶಾಲಾಕ್ಷಿ, ಪ್ರೇಕ್ಷ ಅಂಗನವಾಡಿ ಶಿಕ್ಷಕಿ ಸುರೇಖಾ , ಸಹಾಯಕಿ ಜಯಂತಿ ಹಾಗೂ ವಾಸುದೇವ ,ದಯಾನಂದ, ಸಂಕರ ಸುವರ್ಣ ಮತ್ತು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.ಒಕ್ಕೂಟ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.