ಮಂಗಳೂರು: ಸತತ 4ನೇ ಬಾರಿಗೆ ಸ್ಯಾಂಡಿಸ್ ಕಂಪನಿ ಅರ್ಪಿಸುವ ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲ್ಡ್ ಅವಾರ್ಡ್ಸ್ 2025 ಜೂನ್ 22 ರಂದು ಭಾನುವಾರ ಸಂಜೆ 3:00ಗೆ ಮುಲ್ಕಿಯ ಸುಂದರರಾಮ ಶೆಟ್ಟಿ ಕನ್ವೆನನಲ್ ಸೆಂಟರ್ ಕೋಲ್ನಾಡ್ ಇಲ್ಲಿ ಸಂದೇಶ ರಾಜ್ ಬಂಗೇರ ಇವರ ಸಾರಥ್ಯದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಕನ್ನಡ ಸಿನಿಮಾ ತಾರೆಯರಾದ ರಚನಾ ರೈ, ವೃಂದ ಆಚಾರ್ಯ, ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್ ಹಾಗೂ ಮೋಹಕ ತಾರೆ ಸೋನಲ್ ಮೊಂತೆರೋ ಹಾಗೂ ತುಳು ಚಿತ್ರರಂಗದ ನಿರ್ಮಾಪಕರು, ತಂತ್ರಜ್ಞರು, ಹಿರಿಯ ಮತ್ತು ಕಿರಿಯ ನಟ ನಟಿಯರು ಮತ್ತು ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸ್ಯಾಂಡಿಸ್ ಕಂಪನಿಯ ಮಾಲಕ ಸಂದೇಶ್ ರಾಜ್ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತುಳು ಚಿತ್ರರಂಗದ ನಟ ನಟಿಯರಿಂದ, ಮತ್ತು ಸಿಸಿಲಿಂಗ್ ಗಾಯ್ಸ್ ತಂಡದಿಂದ ಅದ್ಭುತ ನೃತ್ಯ, ರಸಮಂಜರಿ ಹಾಗೂ ಕಾಮಿಡಿ ಕಾರ್ಯಕ್ರಮ ನಡೆಯಲಿದೆ. ಪ್ರಸಿದ್ದ ನಿರೂಪಕರಾದ ಶರ್ಮಿಳಾ ಅಮೀನ್ ಮತ್ತು ವಿನೀತ್ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಸಾಧನೆಗೈದ ಇಬ್ಬರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ 2024 ರಲ್ಲಿ ತೆರೆಕಂಡಿರುವ ಒಟ್ಟು 8 ಸಿನಿಮಾಗಳು ಸ್ಪರ್ಧೆಗೆ ಬಂದಿವೆ. ಲೈಫ್ ಟೈಮ್ ಅಚೀವೆಂಟ್ ಅವಾರ್ಡ್ ಹಾಗೂ ವರ್ಸಟೈಲ್ ಆಕ್ಟರ್ ಅವಾರ್ಡ್ ಸೇರಿ ಒಟ್ಟು 30 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿನಿತ್ ಕುಮಾರ್, ಯಶ್ ರಾಜ್, ಉದಯ ಬಲ್ಲಾಲ್, ಸಾತ್ವಿಕ್ ಪೂಜಾರಿ, ಪ್ರೀತಂ ಉಪಸ್ಥಿತರಿದ್ದರು.