ಕೆದಿಲದಲ್ಲಿ ತೆಂಗಿನ ಮರ ಕುಸಿದು ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದು ಭಾರಿ ಹಾನಿ; ಚಾಲಕ ಅದೃಷ್ಟವಶಾತ್ ಪಾರು

0
18

ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಾಂಧಿನಗರ ಗ್ರಾಮ ಪಂಚಾಯಿತಿ ಸಮೀಪ ಮಾರ್ಗಕ್ಕೆ ಅಡ್ಡವಾಗಿ ತೆಂಗಿನ ಮರ ಬಿದ್ದು ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದು ಕಾರು ಹಾನಿ ಗೊಂಡಿರುತ್ತದೆ ಕಾರು ಚಾಲಕರು ಅದ್ರಷ್ಟವಸಾತ್ ಪಾರು ಗೊಂಡಿರುತ್ತಾರೆ . ವಿಷಯ ತಿಳಿದು ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲದ ಸದಸ್ಯರು ಸ್ಥಳಕ್ಕೆ ಆಗಮಿಸಿ ಲೈನ್ ಮ್ಯಾನ್ ಮತ್ತು ಊರವರ ಸಹಕಾರದೊಂದಿಗೆ ರಸ್ತೆಗೆ ಅಡ್ಡವಾಗಿ ಬಿದ್ದ ಮರ ಮತ್ತು 3 ವಿದ್ಯುತ್ ಕಂಬವನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.