ಮಂಗಳೂರು : ಮಿಲಾಗ್ರಿಸ್ ಕಾಲೇಜು ಮಂಗಳೂರಿನ2025-26ನೇ ಸಾಲಿನ ಜೀವನ ಕೌಶಲ್ಯ ಪೂರಕ ಕೋರ್ಸ್‌ಗಳ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಿಒಡಿಪಿನಿರ್ದೇಶಕರಾದ ಫಾ. ವಿನ್ಸೆಂಟ್ ಡಿಸೋಜಾ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಜೀವನ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಜೀವನ ಕೌಶಲ್ಯಾಧಾರಿತ ತರಬೇತಿಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದ್ದು, ಉದ್ಯೋಗ ಹಾಗೂ ಸ್ವಉದ್ಯೋಗದ ಅವಕಾಶಗಳನ್ನು ಹೆಚ್ಚಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಯೋಗ, ಜಿಎಸ್ಟಿ, ಪ್ರಥಮ ಚಿಕಿತ್ಸೆ, ಫೋಟೋಗ್ರಫಿ, ಬ್ಯೂಟಿಷಿಯನ್, ಈವೆಂಟ್ ಮ್ಯಾನೇಜ್ಮೆಂಟ್, ನೃತ್ಯ, ಕ್ರಾಫ್ಟ್ ಮತ್ತು ಎಂಬ್ರಾಯ್ಡರಿ, ಸಾಫ್ಟ್ ಸ್ಕಿಲ್ಸ್, ಸ್ಟಾರ್ಟ್‌ಅಪ್, ಪತ್ರಿಕೋದ್ಯಮ, ವೈಯಕ್ತಿಕ ಹೂಡಿಕೆ, ಸ್ಪೋಕನ್ ಇಂಗ್ಲಿಷ್, ಕುಲಿನರಿ ಆರ್ಟ್ಸ್ ಹಾಗೂ ಕಂಪ್ಯೂಟರ್ ಮತ್ತು ಟ್ಯಾಲಿ ಸೇರಿದಂತೆ ವಿವಿಧ ಪೂರಕ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಹಾಗೂ ಕ್ಯಾಂಪಸ್ ನಿರ್ದೇಶಕರಾದ ರೆ. ಡಾ. ಅಲ್ವಿನ್ ಸೆರಾವೋ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಕೌಶಲ್ಯಾಧಾರಿತ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿಐಕ್ಯೂಎಸಿಸಂಯೋಜಕರಾದ ಚೇತನಾ ಕುಮಾರಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಜಿತೇಶ್ ಸ್ವಾಗತಿಸಿದರು. ಸಂಯೋಜಕರಾದ ಉಪನ್ಯಾಸಕಿ ಚೈತ್ರಾ ಡಿ . ವಂದಿಸಿದರು. ಉಪನ್ಯಾಸಕಿ ತೇಜಸ್ವಿನಿ ನಿರೂಪಿಸಿದರು.

