ಅಬ್ಬಕ್ಕ ರಾಣಿಯ ಕುರಿತ ವಿಶೇಷ ಸರಣಿ ಉಪನ್ಯಾಸ ಕಾರ್ಯಾಕ್ರಮದ ಸಮಾರೋಪ ಹಾಗೂ ಸಂಶೋಧನಾ ಗ್ರಂಥ ಬಿಡುಗಡೆ ಸಮಾರಂಭ

0
4

ಮಂಗಳೂರು:ಉಳ್ಳಾಲದ ಅಬ್ಬಕ್ಕ ರಾಣಿ ಆಳ್ವಿಕೆಯ 500ನೇ ವರ್ಷಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಉಪನ್ಯಾಸಕರ ಹಾಗೂ ಶಿಕ್ಷಕರ ಸಂಘ (ರಿ)ಮಂಗಳೂರು ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಬ್ಬಕ್ಕ ರಾಣಿಯ ಕುರಿತ 100 ಸರಣಿ ಉಪನ್ಯಾಸ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ನಾಡಿನ ಹಲವು ಖ್ಯಾತ ಉಪನ್ಯಾಸಕರು, ಸಾಹಿತಿಗಳು,ಸಂಶೋಧಕರು ಅಬ್ಬಕ್ಕ ರಾಣಿಯ ಕುರಿತಾಗಿ ಸಂಶೋಧನೆ ನಡೆಸಿ ಸಿದ್ಧಪಡಿಸಿದ ಸಂಶೋಧನಾತ್ಮಕ ಪ್ರಬಂಧಗಳನ್ನೊಳಗೊಂಡ ವಿಶೇಷ ಬೃಹತ್ ಗ್ರಂಥ ಸಂಚಿಕೆಯ ಲೋಕಾರ್ಪಣಾ ಕಾರ್ಯಕ್ರಮವು ಮಂಗಳೂರಿನ ನಿರ್ಮಲ ಭಾರತ್ ಚಾರಿಟೇಬಲ್ ಟ್ರಸ್ಟ್ (ರಿ )ಇದರ ಸಹಯೋಗದೊಂದಿಗೆ ಕಳೆದ ದಿನಾಂಕ 18 4 2026ನೇ ಶನಿವಾರ ಉಳ್ಳಾಲದ ಶಾರದಾ ನಿಕೇತನ ಸಭಾಂಗಣದಲ್ಲಿ ನಡೆಯಿತು.


ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಉಪನ್ಯಾಸಕರ ಹಾಗೂ ಶಿಕ್ಷಕರ ಸಂಘ, ಮಂಗಳೂರು ವಿಭಾಗ ಆಯೋಜಿಸಿಕೊಂಡಿದ್ದ ಅಬ್ಬಕ್ಕರಾಣಿಯ ನೂರು ಉಪನ್ಯಾಸ ಸರಣಿ ಕಾರ್ಯಕ್ರಮಗಳಲ್ಲಿ ಉಪನ್ಯಾಸಕರು,ಸಾಹಿತಿ, ಸಂಶೋಧಕರು ಹಾಗೂ ಚಲನಚಿತ್ರ ನಿರ್ದೇಶಕರೂ ಆಗಿರುವ ಬಿ.ಎ.ಲೋಕಯ್ಯ ಶಿಶಿಲರು ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಸರಣಿ ಉಪನ್ಯಾಸವನ್ನು ನಡೆಸಿಕೊಟ್ಟಿದರಲ್ಲದೆ ಅಬ್ಬಕ್ಕ ರಾಣಿಯ ಕುರಿತಾಗಿ ವಿಶೇಷ ಸಂಶೋಧನೆ ನಡೆಸಿ ಅಬ್ಬಕ್ಕ ರಾಣಿಯ ಕುರಿತಾಗಿ ಈ ವರೆಗೆ ಯಾರೂ ಕಂಡು ಕೇಳರಿಯದ ಬಹಳಷ್ಟು ವಿಚಾರಗಳನ್ನು ತಮ್ಮ ಸಂಶೋಧನಾ ಪ್ರಬಂಧದಲ್ಲಿ ತಿಳಿಯಪಡಿ ಸಿದ್ದಾರೆ. ಇದರಂತೆ ನಾಡಿನ ಹಲವು ವಿದ್ವಾಂಸರು ಸಂಶೋಧಿಸಿದ ಸಂಶೋಧನಾ ಪ್ರಬಂಧಗಳು ಕೂಡ ಈ ಗ್ರಂಥ ಸಂಚಿಕೆಯಲ್ಲಿ ಪ್ರಕಟವಾಗಿರುತ್ತವೆ.
ಸಮಾರಂಭದ ದೀಪ ಪ್ರಜ್ವಲನೆಯನ್ನು ಅಬ್ಬಕ್ಕರಾಣಿಯ ವಂಶಸ್ಥರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ನೆರವೇರಿಸಿದರು. ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷರಾದ ಜಯ.ಸಿ.ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇಣೂರು ಬಾಹುಬಲಿ ಮಸ್ತಕಾಭಿಷೇಕ ಸಮಿತಿಯ ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್ ಇಂದ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘ ದಕ್ಷಿಣ ಪ್ರಾಂತ ಇದರ ಪ್ರಾಂತ ಸಹ ಕಾರ್ಯವಾಹಕರಾದ ಪಿ.ಎಸ್. ಪ್ರಕಾಶ್, ರಾಜ್ಯ ಕೆ.ಆರ್ .ಎಂ ಎಸ್ ನ ರಾಜ್ಯಾಧ್ಯಕ್ಷರಾದ ಗುರುನಾಥ್ ಬಡಿಗೇರ್, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಸಂದೀಪ್ ಬೂದಿಹಾಳ್, ನಿರ್ಮಲ್ ಭಾರತ್ ಚಾರಿಟೇಬಲ್ ಟ್ರಸ್ಟ್ (ರಿ) ಇದರ ವಿಶ್ವಸ್ಥರಾದ ಕೆ. ರಮೇಶ್ ಮುಂತಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖರಾದ ಸುಧೀರ್ ಸಮಾರೋಪ ಭಾಷಣ ನೆರವೇರಿಸಿದರು. ಇದೇ ವೇಳೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ (ರಿ )ಸಂಚಯಗಿರಿ ಬಂಟ್ವಾಳ ಇದರ ಸಂಸ್ಥಾಪಕರಾದ ತುಕಾರಾಂ ಪೂಜಾರಿ ಹಾಗೂ ಡಾ ಆಶಾಲತಾ ಸುವರ್ಣ ಇವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here