ನಮ್ಮ ತುಳುನಾಡ್ ಟ್ರಸ್ಟ್ ಕಾರ್ಯಕಾರಿ ಸಮಿತಿ ಸಭೆ: ಹೊಸ ರಚನೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ತೀರ್ಮಾನ

0
101

ನಮ್ಮ ತುಳುನಾಡ್ ಟ್ರಸ್ಟ್(ರಿ)ಮಂಗಳೂರು ಇದರ ಕಾರ್ಯಕಾರಿ ಸಮಿತಿ ಸಭೆಯು 19/04/2026 ರಂದು ನಗರದ ಕದ್ರಿಯಲ್ಲಿ ನಡೆಯಿತು. 2026-27ನೇ ಸಾಲಿನ ಕಾರ್ಯಕಾರಿ ಸಮಿತಿ ರಚನೆ ಹಾಗೂ ತಾಲೂಕು‌ವಾರು ಘಟಕಗಳ ರಚನೆ ಸೇರಿದಂತೆ ಟ್ರಸ್ಟ್‌ನ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿ ನಿರ್ಣಯವನ್ನು ಮಂಡಿಸಲಾಯಿತು. ಟ್ರಸ್ಟ್‌ನ ಸದಸ್ಯತ್ವ ಅಭಿಯಾನ ಕಾರ್ಯಕ್ಕೆ ಅತೀ ಶೀಘ್ರದಲ್ಲೇ ಚಾಲನೆ ನೀಡಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಟ್ರಸ್ಟ್‌ನ ಸ್ಥಾಪಕರದಂತ ಜಿ.ವಿ‌.ಎಸ್ ಉಳ್ಳಾಲ್, ಟ್ರಸ್ಟಿ ರಾಜೇಶ್ ಯು, ಅಧ್ಯಕ್ಷ‌ರದಂತ ರೋಹಿತಾಶ್ವ, ಉಪಾಧ್ಯಕ್ಷ‌ರು ದಯಾನಂದ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ರೂಪೇಶ್ ರೈ, ಕೀರ್ತಿ ಕಾರ್ಕಳ ತುಳುನಾಡ ತುಡರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here