ಉಜಿರೆ : ಅಲ್ಪಕಾಲದ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಹಿರಿಯ ಸಮಾಜಸೇವಕ ನಾರಾವಿ ಬಳಿಯ ಹೊಸ್ಮಾರು ಧರ್ಮಶ್ರೀ ನಿವಾಸಿ ಎನ್. ಪ್ರೇಮ್‌ಕುಮಾರ್ ಅವರ ಮನೆಗೆ ಗುರುವಾರ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊÊಲಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮೃತರ ಬಹುಮುಖಿ ಸಮಾಜಸೇವಾ ಕಾರ್ಯವನ್ನು ಧನ್ಯತೆಯಿಂದ ಸ್ಮರಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ದಿ. ಪ್ರೇಮ್ ಕುಮಾರ್ ಅವರ ಪತ್ನಿ ಭಾರತಿ, ಸಹೋದರ ವಿಜಯಕುಮಾರ್ ಮತ್ತು ಸಹೋದರಿ ವಿಮಲ ಕುಮಾರಿ ಉಪಸ್ಥಿತರಿದ್ದರು.

