ದಾವಣಗೆರೆ: ಮೈಸೂರಿನ ಕಲಾ ಮಂದಿರದಲ್ಲಿ ಇತ್ತೀಚಿಗೆ 2 ದಿನಗಳಲ್ಲಿ ನಡೆದ ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ರಾಜ್ಯ ಮಟ್ಟದ ಗೀತೋತ್ಸವದ ಸರ್ವಾಧ್ಯಕ್ಷರಾದ ಹಿರಿಯ ಗಾಯಕರಾದ ನಗರ ಶ್ರೀನಿವಾಸ ಉಡುಪರಿಗೆ ಕರ್ನಾಟಕ ಸುಗಮ ಸಂಗೀತ ಪರಿಷತ್ ದಾವಣಗೆರೆ ಜಿಲ್ಲಾ ಘಟಕದವತಿಯಿಂದ ಅಭಿಮಾನದಿಂದ ಅಭಿನಂದಿಸಿ ಬೃಹತ್ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ರಾಜ್ಯಾಧ್ಯಕ್ಷರಾದ ವೈ.ಕೆ.ಮುದ್ದುಕೃಷ್ಣ, ಕಾರ್ಯಾಧ್ಯಕ್ಷರಾದ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಮೈಸೂರು ಜಿಲ್ಲಾ ಘಟಕದ ಡಾ. ನಾಗರಾಜ್ ವಿ.ಬೈರಿ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ, ಹರಿಹರ ತಾಲ್ಲೂಕಿನ ಅಧ್ಯಕ್ಷರಾದ ವಿದುಷಿ ಮಾಧುರಿ ಶೇಷಗಿರಿ, ವಿದುಷಿ ಸಂಗೀತ ರಾಘವೇಂದ್ರ, ಪರಿಷತ್ತಿನ ಸದಸ್ಯರಾದ ಜ್ಯೋತಿ ಗಣೇಶ್ ಶೆಣೈ, ಶಿಲ್ಪಾ ಉಮೇಶ್ ದಂಪತಿಯವರು ಮುಂತಾದವರು ಉಪಸ್ಥಿತರಿದ್ದರು.

