ತಡೆರಹಿತ ಬಸ್ಸಿಗೆ ಕಾರು ಡಿಕ್ಕಿ – ಕಾರಿನ ಚಾಲಕ ಸಹಿತ ಇಬ್ಬರು ಪವಾಡ ಸದೃಶ ಪಾರು

0
32

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡ್ ಬೈಪಾಸ್ ಬಳಿ ತಡೆರಹಿತ ಬಸ್ ಗೆ ಇಕೊ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಚಾಲಕ ಸಹಿತ ಇಬ್ಬರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ.

ಗಾಯಾಳುಗಳನ್ನು ಕಾರಿನ ಚಾಲಕ ಆಂಧ್ರ ಪ್ರದೇಶದ ಚಿತ್ತೂರು ನಿವಾಸಿಗಳಾದ ಸುಕುಮಾರ್ (27) ಮತ್ತು ಭಾನುಪ್ರಕಾಶ್ (27) ಎಂದು ಗುರುತಿಸಲಾಗಿದೆ.
ಉಡುಪಿ ಕಡೆಯಿಂದ ಇಕೊ ಕಾರಿನಲ್ಲಿ ಮುಲ್ಕಿಯ ಕಾರ್ನಾಡ್ ಬೈಪಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂಟರ್ನ್ ತೆಗೆದುಕೊಳ್ಳುವ ದಾವಂತದಲ್ಲಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ವಿಶಾಲ್ ಎಂಬ ಹೆಸರಿನ ತಡೆರಹಿತ ಬಸ್ಸಿಗೆ ಡಿಕ್ಕಿ ಹೊಡೆದಿದೆ.

ಈ ಸಂದರ್ಭ ತಡೆರಹಿತ ಬಸ್ ಚಾಲಕ ಶರತ್ ಎಂಬಾತನು ಅಪಘಾತ ತಡೆಯಲು ಸಾಕಷ್ಟು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಅಪಘಾತದ ರಭಸಕ್ಕೆ ಕಾರಿನ ಎದುರು ಹಾಗೂ ಹಿಂಬದಿ ಜಖಂಗೊಂಡಿದ್ದು, ಬಸ್ಸಿನ ಎದುರು ಭಾಗಕ್ಕೆ ಹಾನಿಯಾಗಿದೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಉಂಟಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಎರಡು ಅಪಘಾತಕ್ಕೀಡಾದ ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ ಅಪಘಾತದ ಸಂದರ್ಭ ಸ್ಥಳದಲ್ಲಿ ಭಾರಿ ಶಬ್ದ ಉಂಟಾಗಿದ್ದು ಸ್ಥಳೀಯರನ್ನು ಕೆಲ ಕಾಲ ಆತಂಕಗೊಳಿಸಿತ್ತು.